Advertisement

BMTC bus: ಬಿಎಂಟಿಸಿ ಬಸ್‌ ಹರಿದು ಮಗು ಸಾವು

11:50 AM Oct 09, 2023 | Team Udayavani |

ಬೆಂಗಳೂರು: ಮಗುವಿನ ಮೇಲೆ ಬಿಎಂಟಿಸಿ ಬಸ್‌ ಹಿಂಬದಿ ಚಕ್ರ ಹರಿದು ಮಗು ಅಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಂಡ್ಯ ಜಿಲ್ಲೆಯ ಮದ್ದೂರಿನ ರಹೀಂನಗರದ ಬೇಬಿ ಆಯೇಷಾ, ನಯೀಂ ಪಾಷಾ ದಂಪತಿಯ ಪುತ್ರ ಆಯಾನ್‌ ಪಾಷಾ(3) ಮೃತ ದುರ್ದೈವಿ. ಈ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಆಯೇಷಾಳ ಅಕ್ಕ ಗರ್ವ ಉನ್ನೀಸಾ ಮತ್ತು ಹಿಂಬದಿ ಕುಳಿತ್ತಿದ್ದ ಬಾಲಕನಿಗೆ ಸಣ್ಣ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಯೇಷಾ ದಂಪತಿ ತಮ್ಮ ಮಗು ಆಯಾನ್‌ನನ್ನು ಸಿಂಗಸಂದ್ರದಲ್ಲಿರುವ ಅಕ್ಕ ಗರ್ವ ಉನ್ನೀಸಾ ಅವರ ಮನೆಯಲ್ಲಿ ಬಿಟ್ಟಿದ್ದರು. ಭಾನುವಾರ ಮಧ್ಯಾಹ್ನ ಗರ್ವ ಉನ್ನೀಸಾ ಅವರು ದ್ವಿಚಕ್ರ ವಾಹನದಲ್ಲಿ ಇಬ್ಬರು ಮಕ್ಕಳನ್ನು ಹಿಂಬದಿ ಕೂರಿಸಿಕೊಂಡು ಗಾರ್ವೆಬಾವಿಪಾಳ್ಯ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ ತೆರಳುವಾಗ ಗಾರ್ವೆಬಾವಿಪಾಳ್ಯದ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಆಯ ತಪ್ಪಿ ಬಿದ್ದಿದ್ದೆ. ಈ ವೇಳೆ ಬಲಭಾಗಕ್ಕೆ ಬಿದ್ದ ಆಯಾನ್‌ ಮೇಲೆ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next