Advertisement

 ಯೂತ್‌ ಅಸೋಸಿಯೇಷನ್‌ ವತಿಯಿಂದ ರಕ್ತದಾನ ಶಿಬಿರ

01:00 AM Mar 15, 2019 | Team Udayavani |

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಹ್ಯಾಂಡ್‌ಪೋಷ್ಟ್ನಲ್ಲಿರುವ ನೂರ್‌ ಯೂತ್‌ ಅಸೋಸಿಯೇಷನ್‌ ಹಾಗೂ ಕರ್ನಾಟಕ ಬ್ಲಿಡ್‌ ಹೆಲ್ಪ್ಲೈನ್‌ ಸಂಸ್ಥೆ ಮತ್ತು ಹಾಸನ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕೊಡ್ಲಿಪೇಟೆ ಹ್ಯಾಂಡ್‌ಪೋಷ್ಟ್ನಲ್ಲಿರುವ‌ ನೂರ್‌ ಮಹಲ್‌ ಸಮಿಪ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಮಸೀದಿಯ ಪ್ರಮುಖ ಮಹಮ್ಮದ್‌ ಪೈಝಿ ಖತೀಬ ಉದ್ಘಾಟಿಸಿದರು.

Advertisement

ಕರ್ನಾಟಕ ಬ್ಲಿಡ್‌ ಹೆಲ್ಪ್ ಲೈನ್‌ ಸಂಸ್ಥೆಯ ಡಾ.ಉದಯ್‌ಕುಮಾರ್‌ ರಕ್ತದಾನದ ಕುರಿತು ಮಾತನಾಡಿದರು.ೆ ಬ್ಲಿಡ್‌ ಹೆಲ್ಪ್ ಲೈನ್‌ ಸಂಸ್ಥೆ ನಿರ್ವಾಹಕ ಜನಾಬ್‌ ಅಶ್ರುಫ್ ಅರಭಿ ಮಾತನಾಡಿ-ರಕ್ತದಾನ ಮಾಡುವ ಕಾರ್ಯಕ್ಕೆ ಜಾತಿ- ಜನಾಂಗ, ಧರ್ಮಗಳೆಂಬ ಬೇದಭಾವಗಳಿ ರುವುದಿಲ್ಲ, ಮತ್ತೂಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ ಈ ಸಂದರ್ಭದಲ್ಲಿ ಕೇವಲ ಮನುಷ್ಯನ ರಕ್ತ ಮಾತ್ರಬೇಕಾಗುತ್ತದೆ ಇದನ್ನು ಅರಿತುಕೊಂಡು ಸಮಾಜದಲ್ಲಿ ಪ್ರತಿಯೊಬ್ಬರೂ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವ ಮೂಲಕ ಮಹತ್ವ ದಾದ ಕಾರ್ಯವನ್ನು ಪೋ›ತ್ಸಾಹಿಸುವಂತೆ ಮನವಿ ಮಾಡಿದರು.

ಪ್ರಮುಖರಾದ ಪಾದರ್‌ ಪ್ರಡ್ಡಿ ಚೆರಿಯನ್‌, ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಔರಂಗಜೇಬ್‌, ಶನಿವಾರಸಂತೆಯ ತಿಮ್ಮಯ್ಯಶೆಟ್ಟಿ ಮಾತನಾಡಿದರು. ಹ್ಯಾಂಡ್‌ಪೋಷ್ಟ್ ಮಸjದ್ದುನ್ನೂರ್‌ ಮಸೀದಿ ಅಧ್ಯಕ್ಷ ಡಿ.ಎ.ಸುಲೈಮಾನ್‌ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಪ್ರಮುಖರಾದ ಕೊಡ್ಲಿಪೇಟೆ ಜಾಮೀಯ ಮಸೀದಿ ಅಧ್ಯಕ್ಷ ಬಿ.ಎ.ಆಹಮ್ಮದ್‌, ಬ್ಯಾಡಗೊಟ್ಟ ಗ್ರಾ.ಪಂ.ಉಪಾಧ್ಯಕ್ಷ ಅಬ್ಟಾಸ್‌, ಕೊಡ್ಲಿಪೇಟೆ ಕರವೇ ಅಧ್ಯಕ್ಷ ಡಿ.ಪಿ.ಭೂಪಾಲ್‌, ಬ್ಲಿಡ್‌ ಹೆಲ್ಪ್ ಸಂಸ್ಥೆ ಪ್ರಮುಖರಾದ ಯತೀಶ್‌ಕುಮಾರ್‌, ವೇಧಕುಮಾರ್‌, ಯತೀಶ್‌, ಮಹಮ್ಮದ್‌ ಹನೀಪ್‌, ಬಿ.ಇ.ಖಾದರ್‌ ಹಾಸನ ರಕ್ತನಿಧಿ ಕೇಂದ್ರದ ಮೋಹನ್‌, ಕಾಂತರಾಜ್‌ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next