Advertisement

ಉಗ್ರ ಪಟ್ಟಿಗೆ ತಲಾಹ್‌: ಚೀನ ಕ್ರಮಕ್ಕೆ ಅಮೆರಿಕ ತರಾಟೆ

09:08 PM Oct 29, 2022 | Team Udayavani |

ನವದೆಹಲಿ: ಪಾಕಿಸ್ತಾನದ ಮೂಲದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ನ ಮಗ, ಉಗ್ರ ಹಫೀಜ್‌ ತಲಾಹ್‌ ಸಯೀದ್‌ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕದ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಿದ ಚೀನ ಕ್ರಮವನ್ನು ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್‌ ತರಾಟೆಗೆ ತೆಗೆದುಕೊಂಡರು.

Advertisement

ನವದೆಹಲ್ಲಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಉಗ್ರ ನಿಗ್ರಹ ಸಮಿತಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, “ಎಲ್ಲಾ ಸಂಬಂಧಿತ ರಾಷ್ಟ್ರಗಳು ಈ ನಿರ್ಣಯದ ಪರವಾಗಿ ನಿಲ್ಲಬೇಕು. ಇದರ ವಿರುದ್ಧ ಯಾವುದೇ ದೇಶವೂ ತಮ್ಮದೇ ಹಾದಿಯನ್ನು ಹಿಡಿಯಬಾರದು. ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ದೇಶಗಳು ಒಂದಾಗಿ ಸಾಗಬೇಕು,’ ಎಂದು ಅವರು ಪ್ರತಿಪಾದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next