Advertisement

ಅಂಧರ ಟಿ20 ಕ್ರಿಕೆಟ್‌: ಭಾರತಕ್ಕೆ 4-1 ಸರಣಿ

06:00 AM Jul 25, 2018 | Team Udayavani |

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಐತಿಹಾಸಿಕ ಅಂಧರ ಟಿ20 ಕ್ರಿಕೆಟ್‌ ಸರಣಿಯನ್ನು ಭಾರತ 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

5 ಪಂದ್ಯಗಳ ಸರಣಿಯಲ್ಲಿ ಸೋಮವಾರದ ಅಂತ್ಯಕ್ಕೆ ಶ್ರೀಲಂಕಾ 1-2 ಹಿನ್ನಡೆಯಲ್ಲಿತ್ತು. ಸರಣಿ ಉಳಿಸಿಕೊಳ್ಳಬೇಕಾದರೆ ಮುಂದಿನ ಎರಡೂ ಪಂದ್ಯವನ್ನು ಗೆಲ್ಲಬೇಕಾದ ಇಕ್ಕಟ್ಟಿಗೆ ಸಿಲುಕಿತ್ತು. ಕ್ರೀಡಾಂಗಣದ ಅಲಭ್ಯತೆ ಹಿನ್ನೆಲೆಯಲ್ಲಿ 2 ಪಂದ್ಯಗಳನ್ನು ಮಂಗಳವಾರವೇ ಆಡಿಸಲಾಯಿತು. ಇವೆರಡನ್ನೂ ಭಾರತ ಜಯಿಸಿತು. ಲಂಕಾ ಕ್ರಿಕೆಟ್‌ ದಿಗ್ಗಜ ಅರ್ಜುನ ರಣತುಂಗ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next