Advertisement

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

10:12 PM Oct 05, 2024 | Team Udayavani |

ಬೆಂಗಳೂರು: ಇಲ್ಲಿ ನಡೆಯುತ್ತಿರುವ 12ನೇ ಐಬಿಸಿಎ ವಿಶ್ವ ಕಿರಿಯರ ಮತ್ತು ಮಹಿಳೆಯರ ಅಂಧರ ಚೆಸ್‌ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದಲ್ಲಿ ಉಕ್ರೇನ್‌ನ ಸಿಲ್ಜೋವಾ ಲಿಸೆಂಕೊ ಲುಬೋವ್‌ ಪ್ರಶಸ್ತಿಗೆ ಹತ್ತಿರವಾಗಿದ್ದಾರೆ.

Advertisement

ಶನಿವಾರ 8ನೇ ಸುತ್ತಿನ ಸ್ಪರ್ಧೆಯ ಬಳಿಕ ಅವರು 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಸಿದಾರೆ. ಆರಂಭಿಕ ಸುತ್ತಿನಿಂದಲೂ ಲುಬೋವ್‌ ಅಗ್ರಸ್ಥಾನ ಕಾಯ್ದುಕೊಂಡು ಬಂದಿರುವುದು ವಿಶೇಷ.

ಶನಿವಾರದ ಸ್ಪರ್ಧೆಯಲ್ಲಿ ಲಿಸೆಂಕೊ ಲುಬೋವ್‌, ವಿಯೆಟ್ನಾಂನ ಫ‌ಮ ಥಿ ಹುಯೋಂಗ್‌ ವಿರುದ್ಧ ಜಯ ದಾಖಲಿಸಿ ಅಂಕ ಹೆಚ್ಚಿಸಿಕೊಂಡರು. ಕಿರಿಯರ ವಿಭಾಗದಲ್ಲಿ ಪೋಲೆಂಡ್‌ನ‌ ಸಲಾಮನ್‌ ಜೂಲಿಯಾ 7 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರು 8ನೇ ಸುತ್ತಿನಲ್ಲಿ ಭಾರತದ ರಾಹುಲ್‌ ವಘೇಲಾ ವಿರುದ್ಧ ಜಯ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next