Advertisement

ಲಾಹೋರ್‌: ಸೂಫಿ ದರ್ಗಾದ ಬಳಿ ಸ್ಫೋಟ ; ಕನಿಷ್ಠ ನಾಲ್ವರ ಸಾವು

09:49 AM May 09, 2019 | Team Udayavani |

ಲಾಹೋರ್‌: ಇಲ್ಲಿರುವ 11 ನೇ ಶತಮಾನದ ಸೂಫಿ ದರ್ಗಾದ ಪ್ರವೇಶ ದ್ವಾರದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿ 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ದಕ್ಷಿಣ ಏಷ್ಯಾದಲ್ಲೇ ದೊಡ್ಡ  ದಾತಾ ದರ್ಬಾರ್‌ ದರ್ಗಾದ ಮಹಿಳೆಯರ ಪ್ರವೇಶ ಗೇಟ್‌ ಬಳಿ ಸ್ಫೋಟ ಸಂಭವಿಸಿದೆ.

ಇದೇ ದರ್ಗಾವನ್ನು ಗುರಿಯಾಗಿರಿಸಿಕೊಂಡು 2010 ರಲ್ಲಿ ದಾಳಿ ನಡೆಸಲಾಗಿತ್ತು, 40 ಮಂದಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next