Advertisement

ಕಾಬೂಲ್‌ ರಾಜತಾಂತ್ರಿಕ ಪ್ರದೇಶದಲ್ಲಿ ಸ್ಫೋಟ:1 ಸಾವು,6 ಮಂದಿಗೆ ಗಾಯ

11:34 AM Feb 24, 2018 | udayavani editorial |

ಕಾಬೂಲ್‌ : ಅಫ್ಘಾನಿಸ್ಥಾನದ ರಾಜಧಾನಿಯಾಗಿರುವ ಕಾಬೂಲ್‌ನಲ್ಲಿನ ಬಿಗಿ ಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ  ಸ್ಫೋಟ ಸಂಭವಿಸಿದೆ.

Advertisement

ಸ್ಫೋಟದಲ್ಲಿ ಒಬ್ಬರು ಮಡಿದು ಇತರ ಆರು ಮಂದಿ ಗಾಯಗೊಂಡಿದ್ದಾರೆ. ನಾಶ ನಷ್ಟದ ಪ್ರಮಾಣ ಎಷ್ಟು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ. 

ಒಳಾಡಳಿತ ಸಚಿವಾಲಯದ ವಕ್ತಾರ ನಜೀಬ್‌ ದಾನಿಶ್‌ ಅವರು ಕಾಬೂಲ್‌ ರಾಜತಾಂತ್ರಿಕ ಪ್ರದೇಶದಲ್ಲಿ ಸ್ಫೋಟ ನಡೆದಿರುವುದನ್ನು ದೃಢೀಕರಿಸಿದ್ದಾರೆ. 

ಸ್ಫೋಟ ನಡೆದಿರುವ ಸ್ಥಳವು ನ್ಯಾಟೋ ಪ್ರಧಾನ ಕಾರ್ಯಾಲಯಕ್ಕೆ ಸಮೀಪದ ಶ್ಯಾಶ್‌ ಡಾರ್ಕ್‌ ಪ್ರದೇಶಕ್ಕೆ ನಿಕಟವಿದೆಯಾದರೂ ಅಮೆರಿಕ ದೂತಾವಾಸಕ್ಕಿಂತ ಹೆಚ್ಚು ದೂರದಲ್ಲಿಲ್ಲ ಎಂದು ಮೂಲಗಳು ತಿಳಿಸಿವೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next