Advertisement
ಮಲ್ಪೆ ಬೀಚ್, ಕೊಳ, ತೊಟ್ಟಂ ಕಡಲತಡಿಯ ಉದ್ದಕ್ಕೂ ತೀರದಲ್ಲಿ ಕಾಣಿಸಿಕೊಂಡು ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತಿದೆ.
ಗಂಗೆಯ ಕೂದಲು
ಕಳೆದೊಂದು ವಾರದಿಂದ ಸಮು ದ್ರತೀರದಲ್ಲಿ ಅಗಾಧ ಪ್ರಮಾಣದಲ್ಲಿ ತೇಲಿ ಬರುತ್ತಿದ್ದ ಶ್ಯಾವಿಗೆ ರೂಪದ ಪಾಚಿ (ಸ್ಥಳೀಯರ ಪ್ರಕಾರ ಗಂಗೆಯ ಕೂದಲು) ಕಳೆದೆರಡು ದಿನದಿಂದ ಕಡಿಮೆಯಾಗಿದೆ. 10 ವರ್ಷಗಳ ಅನಂತರ ಕಿಲೋ ಮೀಟರ್ ದೂರಕೆ à ಪಾಚಿ ವ್ಯಾಪಿಸಿತ್ತು. ಮೀನುಗಾರಿಕೆ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಪ್ರಾಣಿಜನ್ಯ ಪಾಚಿ, ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಸತ್ತು ರಾಶಿಯಾಗಿ ತೇಲಿ ಸಮುದ್ರತೀರಕ್ಕೆ ಬಂದಿದೆ ಎಂದು ತಿಳಿಸಿದ್ದರು. ಹೆಚ್ಚಿನ ಸಂಶೋಧನೆಗಾಗಿ ಮಾದರಿಯನ್ನು ಕೊಂಡೊಯ್ದಿದ್ದಾರೆ.