ಯಾವ ವಸ್ತುವಿನ ಹೆಸರನ್ನು ಹೇಳುತ್ತಾರೋ ಅದನ್ನು ಪ್ರೇಕ್ಷಕರಿಗೆ ಮಾತ್ರ ಸ್ಪಷ್ಟಪಡಿಸಿ ತಿಳಿಸಿ. ನಂತರ ಕೋಣೆಯ ಹೊರಗಡೆ ಇರುವ ಸಹಾಯಕನಿಗೆ ಕೇಳುವಂತೆ ಅನೇಕ ವಸ್ತುಗಳ ಹೆಸರನ್ನು ಹೇಳುತ್ತಾ ಹೋಗಿ. ಆ ಹೆಸರುಗಳ ಮಧ್ಯದಲ್ಲಿ ಪ್ರೇಕ್ಷಕ ಮಹಾಶಯ
ಪಟ್ಟಿ ಮಾಡಿದ ವಸ್ತುವನ್ನು ಸೇರಿಸಿ ಹೇಳಿ. ಮಿಕ್ಕ ವಸ್ತುಗಳ ಹೆಸರನ್ನು ಹೇಳುವಾಗ ಅದಲ್ಲಾ, ಅದಲ್ಲಾ ಎನ್ನುತ್ತಿದ್ದ ಸಹಾಯಕ ಪ್ರೇಕ್ಷಕ ಪಟ್ಟಿ ಮಾಡಿದ ಹೆಸರನ್ನು ಹೇಳುತ್ತಿದ್ದಂತೆಯೇ ಅದೇ ಪ್ರೇಕ್ಷಕ ಹೇಳಿದ ವಸ್ತು ಎನುತ್ತಾನೆ. ಹೊರಗಡೆ ಇದ್ದರೂ ಆತನಿಗೆ ಪ್ರೇಕ್ಷಕ ಹೇಳಿದ ವಸ್ತು ಹೇಗೆ ತಿಳಿಯಿತು ಎಂಬುದೇ ಮ್ಯಾಜಿಕ್.
Advertisement
ತಂತ್ರಪ್ರದರ್ಶನಕ್ಕೆ ಮುಂಚೆಯೇ ಮ್ಯಾಜೀಶಿಯನ್ ಮತ್ತು ಸಹಾಯಕ ತಯಾರಿ ನಡೆಸಿರುತ್ತಾರೆ. ಯಕ್ಷಿಣಿಗಾರ ತಾನು ಒಂದಾದ ಮೇಲೊಂದರಂತೆ ವಸ್ತುಗಳ ಹೆಸರನ್ನು
ಹೇಳುತ್ತಾ ಹೋಗುತ್ತಾನಾದರೂ ಪ್ರೇಕ್ಷಕ ಹೇಳಿದ ವಸ್ತುವನ್ನು ಹೇಳುವ ಮುಂಚೆ ಕಪ್ಪು ಬಣ್ಣದ ವಸ್ತುವಿನ ಹೆಸರನ್ನು ಹೇಳುತ್ತಾನೆ. ಅದುವೇ ಸೀಕ್ರೆಟ್ ಕೋಡ್. ಕಪ್ಪು ಬಣ್ಣದ ವಸ್ತುವಿನ ನಂತರ ಆತ ಹೇಳುವ ವಸ್ತುವೇ ಪ್ರೇಕ್ಷಕ ಆರಿಸಿದ್ದು ಎಂಬುದನ್ನು ಯಕ್ಷಿಣಿಗಾರ ಮತ್ತು ಸಹಾಯಕ ಮುಂಚೆಯೇ ಗೊತ್ತು ಮಾಡಿಕೊಂಡಿರುತ್ತಾರೆ. ಆ ಮೂಲಕ ಕಣ್ಣಾರೆ ನೋಡದೇ ಇದ್ದರೂ ಪ್ರೇಕ್ಷಕ ಪಟ್ಟಿ ಮಾಡಿದ ವಸ್ತುವಿನ ಹೆಸರನ್ನು ಸಹಾಯಕ ಹೇಳಬಲ್ಲ.