ಕಪ್ಪು ತಲೆ ಗೀಜುಗದ ದೇಹಾಕಾರವು ಹೆಣ್ಣು ಕೋಗಿಲೆಯನ್ನು ಸಾಕಷ್ಟು ಹೋಲುತ್ತದೆ. ಅದೇ ಕಾರಣದಿಂದ ಈ ಪಕ್ಷಿಗೆ ಕಪ್ಪು ತಲೆ ಕೋಗಿಲೆ ಕೀಜುಗ ಎಂಬ ಹೆಸರಿದೆ.Black -headed Cuckoo-Shrike (Coracina melanoptera ) RM Bul-Bul +-ಈ ಹಕ್ಕಿ ಗಂಡು -ಹೆಣ್ಣು ಎರಡರಲ್ಲೂ ಪ್ರಧಾನವಾಗಿ ಬೂದು ಬಣ್ಣದಲ್ಲೇ ಕಾಣುತ್ತದೆ. ಗಂಡು ಹಕ್ಕಿ ಸ್ವಲ್ಪ ದಪ್ಪನಾಗಿರುತ್ತದೆ. ಪ್ರಾಯಕ್ಕೆ ಬಂದ ಗಂಡು ಹಕ್ಕಿಯ ತಲೆ ಕಪ್ಪಾಗಿರುತ್ತದೆ. ಮೈ ಬಣ್ಣ ಬೂದು. ಕುತ್ತಿಗೆ ಗಲ್ಲ , ಮೇಲ್ ಎದೆ -ಪಾಟಿ ಬೂದು ಬಣ್ಣದಿಂದ ಕೂಡಿದೆ. ಹಕ್ಕಿಯ ಉಳಿದ ಭಾಗ ತಿಳಿ ಬೂದು ಬಣ್ಣವಿದೆ.
ಈ ಬಣ್ಣ ಬಾಲದ ಬುಡದಿಂದ ತುದಿಯಕಡೆ ಬಂದಂತೆ ತಿಳಿಯಾಗುತ್ತಾ ಬರುತ್ತದೆ. ರೆಕ್ಕೆಯಲ್ಲಿ ಕಪ್ಪು ರೇಖೆ ಇರುತ್ತದೆ. ಹಕ್ಕಿಯ ರೆಕ್ಕೆ, ಬೆನ್ನು, ಬಾಲದ ಮೇಲ್ಭಾಗ ತಿಳಿ ಬೂದು ಬಣ್ಣ ಇದ್ದು ಅದರ ಮೇಲೆ ಕಪ್ಪು ಗೀರುಗಳಿವೆ.
ಇದರ ದೇಹದಲ್ಲಿರುವ ಈ ವರ್ತುಲದಂತಹ ಗೀರು- ಕೋಗಿಲೆ ಹೆಣ್ಣು ಹಕ್ಕಿಯನ್ನು ತುಂಬಾ ಹೋಲುವುದು. ಈ ಕಾರಣದಿಂದಲೇ ಇದರ ಹೆಸರಿನಲ್ಲಿ ಕೋಗಿಲೆ ಪದ ಸೇರಿರುವುದು. ಇದರ ಕೊಕ್ಕು ಕೀಜುಗ ಹಕ್ಕಿಯ ಕೊಕ್ಕನ್ನು ಹೋಲುತ್ತದೆ. ಕೀಜುಗ ಹಕ್ಕಿಯ ಚುಂಚು ತುದಿಯಲ್ಲಿ ಚೂಪಾಗಿ ಕೊಕ್ಕರೆಯಂತೆ ಹರಿತವಾಗಿದೆ. ಇದರಿಂದ ಇದು ತನ್ನ ಬೇಟೆಯನ್ನು ಕಚ್ಚಿ , ಹರಿದು ತಿನ್ನಲು ಸಹಾಯಕವಾಗಿದೆ.
ಕೀಜುಗ ಪ್ರಬೇಧದ ಹಕ್ಕಿ -ರೆಕ್ಕೆ ಹುಳ, ಲಾರ್ವಾ, ಮಿಡತೆ, ಎಲೆ-ಮಿಡತೆ, ಜಾಲ, ಕಟ್ಟಿರುವೆ, ಗೊಂದ ಮೊದಲಾದ ಇರುವೆಗಳ ರೆಕ್ಕೆ ಬಂದು ಹಾರುವಾಗ -ಹಾರಿಕೆಯ ಮಧ್ಯದಲ್ಲಿಯೇ ಹೊಂಚುಹಾಕಿ ಹಾರಿ -ಹಿಡಿದು ತಾನು ಕುಳಿತ ಟೊಂಗೆ ಇಲ್ಲವೇ ತಂತಿ ಅಥವಾ ಕಲ್ಲು ಬಂಡೆಗೆ ಹಿಂತಿರುಗಿ ಬರುತ್ತದೆ. ತನ್ನ ಬಾಯಲ್ಲಿರುವ ಬೇಟೆಯನ್ನು ಚುಂಚಿನಲ್ಲಿ ಭದ್ರವಾಗಿ ಹಿಡಿದು-ಕೆಲವೊಮ್ಮೆ ತಾನು ಕುಳಿತ -ತಂತಿ, ಮರದ ಟೊಂಗೆ ಇಲ್ಲವೇ ಕಲ್ಲು ಬಂಡೆಗೆ ಚಚ್ಚಿ ಚಚ್ಚಿ ಸಾಯಿಸಿ -ಬೇಟೆಯನ್ನು ಹರಿದು ಚೂರು, ಚೂರಾಗಿಸಿ ತಿನ್ನುತ್ತದೆ.
ಗಂಡು, ಹೆಣ್ಣು ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲೂ ಇರುತ್ತದೆ. ಇದರ ನೆಲೆ ಸಮಶೀತೋಷ್ಣ ಮತ್ತು ಶೀತೋಷ್ಣ ಕಾಡು. ಸಣ್ಣ, ಸಣ್ಣ ಮರಗಿಡಗಳಿರುವ ಕಲ್ಲು ಗುಡ್ಡ, ಹಾಗೂ ಸಮುದ್ರ ಮಟ್ಟದಿಂದ 2200 ಮೀ ಎತ್ತರದ ಪ್ರದೇಶಗಳಲ್ಲೂ ಇರುತ್ತವೆ. ಆಹಾರ ಲಭ್ಯತೆ ಆದರಿಸಿ ಕೆಲವೊಮ್ಮೆ ಸ್ವಲ್ಪದೂರ ವಲಸೆ ಹೋಗುತ್ತವೆ.
ಭಾರತ, ಬಾಂಗ್ಲಾ, ಶ್ರೀಲಂಕಾ, ನೇಪಾಳ, ಭೂತಾನದಲ್ಲೂ ಇದೇ ಜಾತಿಗೆ ಸೇರಿದ ಉಪ ಪ್ರಬೇಧಗಳು ಇವೆ. ದಕ್ಷಿಣ ನೇಪಾಳ, ಭಾರತದ-ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳದಲ್ಲೂ ಕಾಣಸಿಗುತ್ತವೆ. ಬಣ್ಣ ದಲ್ಲಿ ಸ್ವಲ್ಪ ವ್ಯತ್ಯಾಸ ಬಿಟ್ಟರೆ ಈ ಉಪ ತಳಿಯ ಸ್ವಭಾವ -ಬಣ್ಣ, ಬೇಟೆಯ ಕ್ರಮ ಎಲ್ಲದಕ್ಕೂ ಸಾಮ್ಯವಿದೆ. ಬೇಟೆಯಾಡಿ ತಿಂದು, ಉಳಿದ ಭಾಗಗಳನ್ನು -ಚೂರು ಚೂರು ಮಾಡಿ ,ಮುಳ್ಳಿಗೆ ಚುಚ್ಚಿಡುತ್ತದೆ. ಮತ್ತೆ ಬೇಟೆ ಸಿಗಲಿ ಎಂದು. ಮಳೆಗಾಲದ ಆರಂಭ ಮತ್ತು ಕೊನೆಯ ಬಿಸಿಲು ಬಂದ ಸಮಯದಲ್ಲಿ ಇವುಗಳ ಚಟುವಟಿಕೆ ಹೆಚ್ಚಾಗುತ್ತದೆ. ಏಕೆಂದರೆ ಮಳೆ ಬಂದು ನಿಂತಾಗ ರೆಕ್ಕೆ ಹುಳಗಳ ಹಾರಾಟ ಹೆಚ್ಚು. ಇವುಗಳನ್ನು ಬೇಟೆಯಾಡಲು ಆ ಸಮಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.
ಇದರ ಎದೆಯಲ್ಲಿ ಇರುವ ಕಿತ್ತಳೆ ಬಣ್ಣ ಮತ್ತು ಬೆನ್ನ ತುದಿಯಲ್ಲಿರುವ ಕಿತ್ತಳೆ ಬಣ್ಣ ನೋಡಿದರೆ ಕಪ್ಪು ತಲೆ ಕೋಗಿಲೆ ಕೀಜುಗ ಬೇರೆ ಎನ್ನುವುದನ್ನು ಸುಲಭವಾಗಿ ಗುರುತಿಸಬಹುದು. ಕಪ್ಪು ತಲೆ ಕೀಜುಗದ ಗಂಡು ಹಕ್ಕಿಯ ತಲೆ ಕಪ್ಪಿದ್ದು -ಅದರ ಹೊಟ್ಟೆ ಭಾಗ ಬಿಳಿ ಬಣ್ಣದಿಂದ ಕೂಡಿರುತ್ತದೆ. ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಈ ಪಕ್ಷಿಯು ಮರಿಮಾಡುವ ಸಮಯ ಆಗಿರುತ್ತದೆ.