ಹುಬ್ಬಳ್ಳಿ: ಕೋವಿಡ್ ಗುಣಮುಖರಾದರಲ್ಲಿ ಕಂಡು ಬಂದ ಬ್ಲ್ಯಾಕ್ ಫಂಗಸ್ 12 ಜನರಲ್ಲಿ ಕಂಡುಬಂದಿದ್ದು, ಇಲ್ಲಿನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಗುಣಮುಖರಾಗಿದ್ದಾರೆ.
ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅತ್ಯವಶ್ಯಕ ಔಷಧ ಕೊರತೆ ಇದೆ ಎಂದು ಕಿಮ್ಸ್ ನ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ
ಔಷಧ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ವೈದ್ಯರು ಬೇರೆ ರೀತಿಯಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಸೋಂಕಿತರಿಗೆ ಯಾವುದೇ ತೊಂದರೆಯಿಲ್ಲ ಎಂದು ಕಿಮ್ಸ್ ನಿರ್ದೇಶಕರು ತಿಳಿಸಿದರು.
ಕೇರಳದಿಂದ ಔಷಧಿ ತರಿಸಲು ಚಿಂತನೆ ನಡೆದಿದೆ. ರಾಜ್ಯದ ಇನ್ನುಳಿದ ಪ್ರದೇಶಗಳಿಂದಲು ಔಷಧಿ ಕಳುಹಿಸುವಂತೆ ಕೋರಲಾಗಿದೆ ಎಂದು ಕಿಮ್ಸ್ ನ ಇಎನ್ ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ ತಿಳಿಸಿದರು.