Advertisement
ಮಂಗಳವಾರ “ಉದಯವಾಣಿ’ ವತಿಯಿಂದ ಬ್ಲ್ಯಾಕ್ ಫಂಗಸ್ ಬಗ್ಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ನೇತ್ರ ವಿಭಾಗದ ಯುನಿಟ್ ಮುಖ್ಯಸ್ಥೆ ಡಾ| ವಿಜಯಾ ಪೈ, ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥೆ ಡಾ| ಕವಿತಾ ಸರವು, ಕಿವಿ, ಮೂಗು, ಗಂಟಲು (ಇಎನ್‌ಟಿ) ವಿಭಾಗದ ಮುಖ್ಯಸ್ಥ ಡಾ| ಬಾಲಕೃಷ್ಣನ್ ಆರ್. ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ| ಸುರೇಂದ್ರ ಚಿಂಬಾಳ್ಕರ್ ಯೋಜನೆ ಸೌಲಭ್ಯದ ಕುರಿತು ತಿಳಿಸಿದರು.
ಕೊರೊನಾ ಸೋಂಕಿನಿಂದ ಗುಣ ಮುಖ ಹೊಂದಿರುವವರು ಕನಿಷ್ಠ ಒಂದು ತಿಂಗಳು ಫಂಗಸ್ ಜಾಸ್ತಿ ಇರುವ ಕಡೆ ಹೋಗಬಾರದು. ಮಣ್ಣು, ಗಿಡಮರ, ಕೊಳೆತ ಹಣ್ಣು-ತರಕಾರಿ ಇರುವಲ್ಲಿ ಫಂಗಸ್ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರನ್ನು ಫಂಗಸ್ ಉಸಿರಾಟದ ಮೂಲಕ ಪ್ರವೇಶಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಸಮಸ್ಯೆ ಇರದು. ಮೊದಲು ಕೊರೊನಾದಿಂದ ರಕ್ಷಣೆ ಪಡೆಯಲು ಉತ್ತಮ ಮಾಸ್ಕ್ ಧರಿಸುವುದು, ಗುಂಪಿನಲ್ಲಿ ಸೇರದಿರುವುದು, ದೈಹಿಕ ಅಂತರ ಕಾಪಾಡುವುದರ ಜತೆ ವ್ಯಾಕ್ಸಿನ್ ಹಾಕಿ ಕೊಳ್ಳಬೇಕು. ಆಕ್ಸಿಜನ್ ಕಾನ್ಸಂ ಟ್ರೇಟರ್ ಬಳಸುವವರು ಡಿಸ್ಟಿಲ್ ನೀರು, ಕುದಿಸಿ ಆರಿಸಿದ ನೀರು ಕುಡಿಯಬೇಕು. ಬ್ಲ್ಯಾಕ್ ಫಂಗಸ್ ತಡೆ ಯಲು ಸದ್ಯ ಔಷಧವಿಲ್ಲ ಎಂದರು. ಮಧುಮೇಹದ ಪಾತ್ರ
ಕೊರೊನಾ ಸೋಂಕಿತರಲ್ಲಿ ಶೇ. 90 ಮಧುಮೇಹಿಗಳು, ಬ್ಲ್ಯಾಕ್ ಫಂಗಸ್ ಶೇ. 70 ಅನಿಯಂತ್ರಿತ ಮಧುಮೇಹಿಗಳಿಗೆ ಬಂದಿದೆ. ಕೊರೊನಾ ಸೋಂಕಿನಲ್ಲಿ ಶೇ. 1 ಮರಣ ಪ್ರಮಾಣ ವಾಗಿದ್ದರೆ, ಬ್ಲ್ಯಾಕ್ ಫಂಗಸ್‌ನಲ್ಲಿ ಶೇ. 40-50ರಷ್ಟು ಇದೆ.
Related Articles
ಬ್ಲ್ಯಾಕ್ ಫಂಗಸ್‌ನ ಮೂಲ ಹೆಸರು ಮ್ಯೂಕರ್‌ವೆುçಕೋಸಿಸ್. ವೈಟ್ ಫಂಗಸ್‌ಗೆ ಕ್ಯಾಂಡಿಡಾ ಎಂದೂ ಎಲ್ಲೋ ಫಂಗಸ್‌ಗೆ ಮ್ಯೂಕರ್‌ಸೆಪ್ಟಿಕಸ್ ಎನ್ನುತ್ತಾರೆ. ಈ ಫಂಗಸ್ ಮಣ್ಣು, ಗಿಡ, ಕೊಳೆತ ಹಣ್ಣು-ತರಕಾರಿ, ಗೊಬ್ಬರದಲ್ಲಿರುತ್ತದೆ. ಇದು ಗಾಳಿಯಲ್ಲಿ ಹರಡಲಿದ್ದು, ನಾಶಪಡಿಸಲಾಗದು. ಉಸಿರಾಟದ ಮೂಲಕ ದೇಹವನ್ನು ಹೊಕ್ಕುತ್ತದೆ. ಅಂಟು ರೋಗ ಅಲ್ಲ ಸಾಂಕ್ರಾಮಿಕ ರೋಗವೆಂದರೆ ಕ್ರಿಮಿಗಳಿಂದ ಹರಡುವುದು. ಇದು ಸಾಂಕ್ರಾಮಿಕ ರೋಗ ಹೌದು. ಆದರೆ ಅಂಟುರೋಗವಲ್ಲ. ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಕೊರೊನಾ ಬಂದವರಿಗೆ ಫಂಗಸ್ ಮೂಗಿನ ಮೂಲಕ ಸೈನಸ್‌ಗೆ, ಅಲ್ಲಿಂದ ಕಣ್ಣು, ಮಿದುಳಿಗೆ, ರಕ್ತನಾಳಗಳಿಗೆ ಹೋಗುತ್ತದೆ. ಹೀಗಾದಾಗ ಪಾರ್ಶ್ವವಾಯು ಸಮಸ್ಯೆಯೂ ಬರಬಹುದು. ಕ್ಯಾನ್ಸರ್, ಅಂಗ ಕಸಿಯಾದವರಿಗೆ ಬಿಳಿ ರಕ್ತಕಣಗಳ ಪ್ರಮಾಣ ಕಡಿಮೆಯಾದಾಗ ಶ್ವಾಸಕೋಶಕ್ಕೂ ಫಂಗಸ್ ತಲುಪಬಹುದು. ಫಂಗಸ್ ಮೂಗಿನ ಮೂಲಕ ಅಥವಾ ಯಾವುದೇ ಗಾಯದ ಮೂಲಕವೂ ಪ್ರವೇಶಿಸಬಹುದು. ಬೀಜಕ (SPORE)ರೂಪದಲ್ಲಿರುವ ಇದು ದೇಹಕ್ಕೆ ಹೋದ ಬಳಿಕ ಅಲ್ಲಿನ ವಾತಾವರಣದಿಂದ ಫಂಗಸ್ ಆಗಿ ಮಾರ್ಪಡುತ್ತದೆ. ಕೊರೊನಾ ಸೋಂಕು ವೈರಸ್‌ನಿಂದ ಬಂದರೆ, ಬ್ಲ್ಯಾಕ್ ಫಂಗಸ್ ಫಂಗಸ್‌ನಿಂದ ಬರುತ್ತದೆ.
Advertisement
ಆಯುಷ್ಮಾನ್ ಯೋಜನೆಕೊರೊನಾಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಡಿ ಎಪಿಎಲ್, ಬಿಪಿಎಲ್ ಕಾರ್ಡ್ ದಾರರು ಚಿಕಿತ್ಸೆ ಪಡೆಯಬಹುದು. ಆಯು ಷ್ಮಾನ್ ಭಾರತ್ ಕಾರ್ಡ್‌ದಾರರಲ್ಲದವರೂ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆಧಾರ್ ಕಾರ್ಡ್ ಅಥವಾ ಇನ್ನಾವುದೇ ದಾಖಲೆ ತೋರಿಸಿ ಸೌಲಭ್ಯ ಪಡೆಯ ಬಹುದು. ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕೊಡುವುದಾಗಿ ಸರಕಾರ ತಿಳಿಸಿದೆ. ಆಯುಷ್ಮಾನ್ ಯೋಜನೆಯಡಿ ಈ ಕಾಯಿಲೆ ಇದುವರೆಗೆ ಸೇರಿಲ್ಲ. ಬ್ಲ್ಯಾಕ್ ಫಂಗಸ್ ಹೊಸ ಕಾಯಿಲೆಯಲ್ಲ
ಬ್ಲ್ಯಾಕ್ ಫಂಗಸ್ ಹೊಸ ಕಾಯಿಲೆಯಲ್ಲ. ಇದು ಹಿಂದೆಯೂ ಇತ್ತು. ಬಹಳ ಕಡಿಮೆ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದರು. ಈಗ ಕೊರೊನಾ ಸೋಂಕು ಹೆಚ್ಚಾಯಿತು. ಈಗಾಗಲೇ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಹೆಚ್ಚೆನಿಸಿದೆ. ಕೇವಲ ಅತಿಯಾದ ಮಧುಮೇಹ ಇರುವವರಿಗೆ ಮಾತ್ರವಲ್ಲ, ಕ್ಯಾನ್ಸರ್ ರೋಗಿಗಳು, ಕಿಡ್ನಿ ಇತ್ಯಾದಿ ಅಂಗಾಂಗಗಳ ಕಸಿ ಮಾಡಿದವರು, ಕಿಮೋ ಥೆರಪಿ ಪಡೆಯುವವರು, ಸ್ಟಿರಾಯ್ಡ ಔಷಧ ಪಡೆಯುವವರು, ಎಚ್‌ಐವಿ ಸೋಂಕಿತರು ಹೀಗೆ ವಿವಿಧ ವರ್ಗಗಳಿಗೆ ಬ್ಲ್ಯಾಕ್ ಫಂಗಸ್ ಬರುತ್ತದೆ. ಸ್ಟಿರಾಯ್ಡ ಗೆ ಅತಿ ಶೀಘ್ರವೇ ರೋಗವನ್ನು ನಿಯಂತ್ರಣಕ್ಕೆ ತರುವ ಶಕ್ತಿ ಇದೆ. ಕೊರೊನಾ ಸೋಂಕು ಉಲ½ಣಾವಸ್ಥೆಗೆ ತಲುಪಿ ಆಕ್ಸಿಜನ್ ಹಾಸಿಗೆ ಯಲ್ಲಿರುವವರಿಗೆ ಸ್ಟಿರಾಯ್ಡ ನೀಡಬೇಕು. ಆದರೆ ಸೋಂಕು ನಿಯಂ ತ್ರಣಕ್ಕೆ ತರಲೆಂದು ಅತಿಯಾಗಿ ಕೊಟ್ಟರೂ ಸಮಸ್ಯೆ ಬಂದೀತು. ಚಿಕಿತ್ಸೆ ವೆಚ್ಚದಾಯಕ
ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ಬಹು ವಿಭಾಗಗಳ ತಂಡ ಕಾರ್ಯನಿರ್ವಹಿಸಬೇಕು. ಶಸ್ತ್ರಚಿಕಿತ್ಸೆ ಬಹಳ ಮುಖ್ಯ. ಒಟ್ಟಾರೆಯಾಗಿ ವೆಚ್ಚದಾಯಕ.ಈಗ ಒಮ್ಮೆಲೆ ರೋಗ ಹೆಚ್ಚಾದ ಕಾರಣ ಪೂರಕ ಔಷಧದ ಕೊರತೆ ಎದುರಾಗಿದೆ. ರೋಗಲಕ್ಷಣಗಳು
ಮುಖದ ಒಂದು ಭಾಗದಲ್ಲಿ ನೋವು, ಮೂಗಿ ನಿಂದ ರಕ್ತ, ಬೂದು, ಕಪ್ಪು ಬಣ್ಣದ ನೀರು ಸಿಂಬಳ ರೂಪದಲ್ಲಿ ಹೊರಬರುವುದು, ಒಂದು ಕೆನ್ನೆ ನೋಯುವುದು, ದೃಷ್ಟಿ ಕಡಿಮೆಯಾಗುವುದು, ಒಂದು ಎರಡಾಗಿ ಕಾಣುವುದು, ಕಣ್ಣು -ರೆಪ್ಪೆ ಕಪ್ಪಾಗುವುದು, ಹಲ್ಲು ನೋವು, ಹಲ್ಲು ಅಲುಗಾಡುವುದು, ಬಾಯಲ್ಲಿ ಹುಣ್ಣಾಗುವುದು ಇತ್ಯಾದಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು. ಇದು ಕೊರೊನಾದಿಂದ ಗುಣಮುಖರಾದ ಬಳಿಕ ಕಂಡು ಬರುತ್ತದೆ. ಒಂದೆ ರಡು ದಿನಗಳಲ್ಲೇ ತೀವ್ರಗೊಳ್ಳುವ ಕಾರಣ ಲಕ್ಷಣ ಕಂಡುಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.