Advertisement

ಬಿ.ಎಲ್ ಸಂತೋಷ್ ಗೋವಾಕ್ಕೆ ಭೇಟಿ: ಬಿಜೆಪಿ ಸಚಿವ-ಶಾಸಕರೊಂದಿಗೆ ಚರ್ಚೆ

02:09 PM Jun 10, 2021 | Team Udayavani |

ಪಣಜಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗೋವಾಕ್ಕೆ ಆಗಮಿಸಿದ್ದು, ಕರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸಚಿವರು ಶಾಸಕರು ಕೈಗೊಂಡ ಕಾರ್ಯಗಳ ಬಗ್ಗೆ ಪಣಜಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.

Advertisement

ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಜನತೆಯಲ್ಲಿ ಜಾಗೃತಿ ನಿರ್ಮಾಣ ಮಾಡಿ ಎಂದು ಬಿ.ಎಲ್ ಸಂತೋಷ್ ಸಲಹೆ ನೀಡಿದರು.

ಕರೋನಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೀವು ಮಾಡಿರುವ ಸಹಾಯವನ್ನು ಜನತೆ ಮರೆಯುವುದಿಲ್ಲ. ಜನತೆಯ ಸಂಕಷ್ಟಕ್ಕೆ ಸ್ಫಂಧಿಸಿ ಸಹಾಯ ಮಾಡಬೇಕು. ಇದರೊಂದಿಗೆ ಪಕ್ಷ ಸಂಘಟನೆಯ ಕೆಲಸವನ್ನೂ ಮಾಡಬೇಕು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮಾಡಿದ ಉತ್ತಮ ಕೆಲಸವನ್ನು ಜನತೆ ಎಂದೂ ಮರೆಯುವುದಿಲ್ಲ ಎಂದು ಬಿ.ಎಲ್ ಸಂತೋಷ್ ರವರು ಬಿಜೆಪಿ ಸಚಿವರು, ಶಾಸಕರುಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ರಾಜ್ಯಸಭಾ ಸದಸ್ಯ ವಿನಯ್ ತೆಂಡುಲ್ಕರ್, ಮಾಜಿ ಸಂಸದ ನರೇಂದ್ರ ಸಾವಯಿಕರ್, ದಾಮೋದರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next