Advertisement
1937ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ 600 ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಪ್ರಾರಂಭಿಸಿ ಆನಂತರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗದ ಮೂಲಕ ಖ್ಯಾತಿ ಗಳಿಸಿದ್ದು, ಲಕ್ಷಾಂತರ ಮಂದಿ ಶಿಷ್ಯಕೋಟಿಯನ್ನು ಹೊಂದಿದ್ದರು. ಯೋಗಾಚಾರ್ಯರೆಂದೇ ಖ್ಯಾತರಾಗಿ ಪದ್ಮಭೂಷಣ, ಪದ್ಮವಿಭೂಷಣ, ನಾಡೋಜ ಪ್ರಶಸ್ತಿ ಪಡೆದುಕೊಂಡಿದ್ದ ಬಿಕೆಎಸ್ ಅಯ್ಯಂಗಾರ್ ಅವರು ವಿಶ್ವದ 56 ರಾಷ್ಟ್ರಗಳಲ್ಲಿ ಯೋಗ ತರಬೇತಿ ಶಾಖೆಗಳನ್ನು ಆರಂಭಿಸಿ ಅಪಾರ ಶಿಷ್ಯವರ್ಗವನ್ನು ಹೊಂದುವ ಮೂಲಕ ಯೋಗವನ್ನು ವಿಶ್ವಮಟ್ಟದ ಖ್ಯಾತಿ ತಂದುಕೊಟ್ಟರು.
Related Articles
Advertisement
ಬೆಳ್ಳೂರಿನ ಮರೆಯದ ಅಯ್ಯಂಗಾರರು: ತಮ್ಮ ಹುಟ್ಟೂರಿನ ಋಣ ತೀರಿಸಲು ಅಯ್ಯಂಗಾರರು, ಬೆಳ್ಳೂರು ಕೃಷ್ಣಮಾಚಾರ್ಯ ಶೇಷಮ್ಮ ಸ್ಮಾರಕ ಟ್ರಸ್ಟ್ ಸ್ಥಾಪಿಸಿ ಇಲ್ಲಿ ಸುಸಜ್ಜಿತವಾದ ಶಾಲೆ, ಆಸ್ಪತ್ರೆ ಸ್ಥಾಪಿಸಿದ್ದಾರೆ. ಗ್ರಾಮದಲ್ಲಿ ತಾವು ಓದಿದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಬೆಳ್ಳೂರಿನಲ್ಲಿ 2 ಕೋಟಿರೂ ವೆತ್ಛದಲ್ಲಿ ಸುಂದರವಾದ ಪಿಯು ಕಾಲೇಜು ಕಟ್ಟಡವನ್ನು ನಿರ್ಮಿಸಿ ಉಚಿತ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಯೋಗದಲ್ಲಿ ಪರಿಣಿತಿರಾಗುವಂತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಜನಮಾನಸದಲ್ಲಿ ನೆಲೆಗೊಂಡಿದ್ದ ಬಿಕೆಎಸ್ ಅಯ್ಯಂಗಾರರು ವಿಧಿವಶರಾದರೂ ಅವರು ಯೋಗಶಿಕ್ಷಣದ ಮೂಲಕ ಇಡೀ ವಿಶ್ವದಲ್ಲಿ ತಮ್ಮ ನೆನಪನ್ನು ಉಳಿಸಿ ಹೋಗಿದ್ದಾರೆ.
ಯೋಗದಿಂದ ಬದುಕು ಸುಂದರಇಂದಿನ ಆಹಾರ ಪದ್ಧತಿ ನಮ್ಮನ್ನು ರೋಗಗಳೆಡೆಗೆ ನೂಕಿರುವಾಗ ಅದನ್ನು ಮೆಟ್ಟಿನಿಂತು ಸುಂದರ ಬದುಕು ನೀಡುವ ಶಕ್ತಿ ಯೋಗಕ್ಕೆ ಮಾತ್ರವಿದೆ ಎನ್ನುತ್ತಿದ್ದ ಅವರ ಮಾತುಗಳು ಎಂದೆಂದಿಗೂ ಪ್ರಸ್ತುತ. ನೈತಿಕ, ಮಾನಸಿಕ, ಪ್ರಾಣಿಕ, ಭೌದ್ದಿಕ ಅಹಂಕಾರ, ಚಿತ್ತ, ದಿವ್ಯದ ಏಳು ಮೆಟ್ಟಿಲುಗಳನ್ನು ಏರಿದಾಗಲೇ ಬದುಕು ಸಾರ್ಥಕವೆಂದು ಬಿಕೆಎಸ್ ಅಯ್ಯಂಗಾರರು ಯೋಗ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತೀಯ ಸಂಸ್ಕೃತಿಯ ಯೋಗಕ್ಕೆ ಮಾರು ಹೋಗಿದ್ದಾರೆ. ನಾವು ಅವರ ಸಂಸ್ಕೃತಿಯತ್ತ ಸಾಗುತ್ತಿರುವುದು ವಿಷಾದದ ಸಂಗತಿ ಎಂದು ಹೇಳುತ್ತಿದ್ದ ಅವರ ಮಾತುಗಳನ್ನು ಮರೆಯದೇ ಯೋಗದತ್ತ ಮನಸ್ಸನ್ನು ಕೇಂದ್ರೀಕರಿಸುವುದೇ ಅವರಿಗೆ ನೀಡುವ ಗೌರವವಾಗಿದೆ. ರೂಪ ಲಾವಣ್ಯ, ಉತ್ತಮ ಆರೋಗ್ಯ, ವಜ್ರದೇಹಕ್ಕಾಗಿ ಯೋಗಸಾಧನೆ ಮಾಡುವಂತೆ ಸಲಹೆ ನೀಡುತ್ತಿದ್ದ ಅವರು, ಯೋಗ ಶಿಕ್ಷಣದಿಂದ ಉತ್ತಮ ಆರೋಗ್ಯ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತೆ ಅನೇಕ ಸಂದರ್ಭಗಳಲ್ಲಿ ಸಮಾಜಕ್ಕೆ ಕವಿಮಾತು ಹೇಳಿದ್ದರು. ● ಕೆ.ಎಸ್.ಗಣೇಶ್