Advertisement

ಬಿಜೆಪಿಯಲ್ಲೀಗ ಭಿನ್ನಮತ ಭುಗಿಲು ಬಿ.ಕೆ. ಹರಿಪ್ರಸಾದ್‌

12:54 AM Apr 14, 2023 | Team Udayavani |

ಉಡುಪಿ: ಬಿಜೆಪಿಗೆ ಜನರ ಬದುಕಿನ ಬಗ್ಗೆ ಚಿಂತೆಯಿಲ್ಲ. ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಲಾಗದೆ ಅಭ್ಯರ್ಥಿಗಳನ್ನೇ ಬದಲಿಸಿ, ಆಕ್ರೋಶದ ಜ್ವಾಲೆಯನ್ನು ಎದುರಿಸುತ್ತಿದೆ ಎಂದು
ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿ ಪ್ರಸಾದ್‌ ವಾಗ್ಧಾಳಿ ನಡೆಸಿದರು.

Advertisement

ಶಿಸ್ತಿನ ಪಕ್ಷ, ದೇಶಭಕ್ತರ ಪಕ್ಷ ಎಂದದ್ದಷ್ಟೇ. ಈಗ ಎದ್ದಿರುವ ಭಿನ್ನಮತ ನೋಡಿದರೆ ಇದು ಬೂಟಾ ಟಿಕೆಯ ಪಕ್ಷ ಎಂಬುದು ಸ್ಪಷ್ಟವಾಗುತ್ತಿದೆ. ಕ್ರಿಮಿನಲ್‌ ಹಿನ್ನೆಲೆ ಇರುವ 22 ಶಾಸಕರು ಅದರಲ್ಲಿದ್ದಾರೆ. ಜೆಡಿಎಸ್‌ನಲ್ಲಿ 7, ಕಾಂಗ್ರೆಸ್‌ನಲ್ಲಿ ಐವರು ಮಾತ್ರ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಇಲ್ಲದ ಕಡೆ ಒಬ್ಬರನ್ನೇ ಎರಡೆರೆಡು ಕಡೆ ನಿಲ್ಲಿಸಿದೆ ಎಂದು ಟೀಕಿಸಿದ ಅವರು ಎಲ್ಲ ಕ್ಷೇತ್ರಗಳ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಿ ದ್ದೇವೆ. ಡಾ| ಎಂ. ವೀರಪ್ಪ ಮೊಲಿ ನಮ್ಮ ಪಕ್ಷದ ಪ್ರಭಾವಿ ನಾಯಕರು. ಅವರು ಕೆಲವು ಹೆಸರನ್ನು ಸೂಚಿಸಿದ್ದಾರೆ. ಅದನ್ನು ಪಕ್ಷ ಗಮನಿಸುತ್ತದೆ. ಚುನಾವಣೆ ಪ್ರಚಾರದಲ್ಲೂ ಅವರನ್ನು ಸಕ್ರಿಯ ವಾಗಿ ತೊಡಗಿಸಿಕೊಳ್ಳಲಿದ್ದೇವೆ ಎಂದರು.

ಭಿನ್ನಮತ ಶಮನ
ಉಡುಪಿ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತ ಶಮನಕ್ಕೆ ಬೇಕಾದ ಎಲ್ಲ ಕ್ರಮ ತೆಗೆದುಕೊಂಡಿ ದ್ದೇವೆ. ಅಸಮಾಧಾನಗೊಂಡಿ ರುವ ಆಕಾಂಕ್ಷಿಯ ಜತೆಗೆ ಮಾತುಕತೆ ನಡೆಸಿದ್ದು, ಒಂದೆರಡು ದಿನ ದಲ್ಲಿ ನಮ್ಮೊಂದಿಗೆ ಸೇರುವರು ಎಂದರು.

ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌, ಬ್ಲಾಕ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಪ್ರಮುಖರಾದ ಎಂ.ಎ. ಗಫೂರ್‌, ಪ್ರಖ್ಯಾತ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

ಪಾಪ ಪ್ರಾಯಶ್ಚಿತ್ತ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅವಧಿಯಲ್ಲಿ ಮಾಡಿರುವ ಪಾಪ ಕಾರ್ಯಗಳ ಪ್ರಾಯಶ್ಚಿತ್ತಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ನಡೆಸಿದ ದುರಾಡಳಿತಕ್ಕೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಾಗದು. ಕಾಂಗ್ರೆಸ್‌ನ ತಣ್ತೀ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next