Advertisement
ಸಮರಕ್ಕೆ ಸಿದ್ಧ ಎಂದು ಶಿವಕುಮಾರ್ ಶಂಖಾನಾದ ಮಾಡಿದ್ದು ಮೈತ್ರಿ ಪಕ್ಷದ ಅನುಮಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಅಬ್ಬರ ಸೃಷ್ಟಿಸುವ ಏಕೈಕ ಕಾರಣಕ್ಕೆ ಅವರು ಈ ತಂತ್ರ ಹೆಣೆದಿದ್ದು ಅಂತಿಮವಾಗಿ ಸೋದರನನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚೆಂಬುದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಮುಕ್ತವೇ?: ರಾಮನಗರ ಡಿ. ಕೆ.ಶಿವಕುಮಾರ್ ಅವರ ಜನ್ಮ ಭೂಮಿಯಾದರೆ, ಕುಮಾರಸ್ವಾಮಿಯವರ ಕರ್ಮಭೂಮಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ, ಕನಕಪುರ, ರಾಮನಗರದಲ್ಲಿ ಕಾಂಗ್ರೆಸ್ ಗೆದ್ದರೆ, ಚನ್ನಪಟ್ಟಣ ಮಾತ್ರ ಜೆಡಿಎಸ್ ಪಾಲಾಗಿತ್ತು. ಈಗ ಶತಪ್ರಯತ್ನದ ಮೂಲಕ ಚನ್ನಪಟ್ಟಣವನ್ನೂ ಗೆದ್ದು ರಾಮ ನಗರವನ್ನು “ಜೆಡಿಎಸ್ ಮುಕ್ತ’ ಗೊಳಿಸಬೇಕೆಂಬ ಹಠ ಡಿಕೆ ಸೋದರರದ್ದು. ಹೀಗಾಗಿ ದೇವೇಗೌಡ ಕುಟುಂಬ – ಡಿಕೆ ಸೋದರರ ಜಿದ್ದಾಜಿದ್ದಿಗೆ ಇದು ವೇದಿಕೆಯಾಗುವುದು ನಿಶ್ಚಿತ.
Related Articles
Advertisement
ಈಗಿರುವ ಚರ್ಚೆಯ ಪ್ರಕಾರ ಜ್ಯೋತಿಷಿಯೊಬ್ಬರ ಸಲಹೆ ಪ್ರಕಾರ ಶಿವಕುಮಾರ್ ಚನ್ನಪಟ್ಟಣದಿಂದ ಸ್ಪರ್ಧೆಗೆ ಇಳಿದಿದ್ದಾರೆ ಎನ್ನಲಾಗಿದೆ. ಇದೊಂದು ತಂತ್ರಗಾರಿಕೆಯ ಆಟ. ಏಕೆಂದರೆ ಚನ್ನಪಟ್ಟಣದ ಜಾತಿ ಸಮೀಕರಣ ಶಿವಕುಮಾರ್‌ಗೆ ಸ್ಪಷ್ಟವಾಗಿ ಗೊತ್ತು. ಇಲ್ಲಿ ಸುಮಾರು 25 ಸಾವಿರ ಕುರುಬರು, 30 ಸಾವಿರ ಮುಸ್ಲಿಮರು ಹಾಗೂ 25 ಸಾವಿರ ದಲಿತ ಸಮುದಾಯದ ಮತಗಳಿವೆ. ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಈ “ಅಹಿಂದ’ ಮತ ಕ್ರೋಡೀಕರಣ ಹೇಗೆ ಆಗಲಿದೆ ಎಂಬುದು ಗೊತ್ತಿಲ್ಲ. ಆಗ ಶಿವಕುಮಾರ್ ಪಾಲಿಗೆ ಸ್ಪರ್ಧೆ ದುಬಾರಿ ಆಗಲೂಬಹುದೆಂಬ ವಾದವೂ ಇದೆ. ಖ್ಯಾತ ಜ್ಯೋತಿಷಿಯೊಬ್ಬರ ಜತೆಗೆ ಡಿ.ಕೆ.ಸುರೇಶ್ ಕೂಡ 2 ದಿನಗಳ ಹಿಂದೆ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿರುವುದರಿಂದ ಸುರೇಶ್ ಸ್ಪರ್ಧೆ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
-ರಾಘವೇಂದ್ರ ಭಟ್