Advertisement
ಈಗ ಉಡುಪಿ ಜಿ.ಪಂ., ಮೂರೂ ತಾ.ಪಂ., ಕಾರ್ಕಳ ಪುರಸಭೆ, ಬಹುತೇಕ ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕುಂದಾಪುರ ಪುರಸಭೆ, ಸಾಲಿಗ್ರಾಮ ಪ.ಪಂ.ನಲ್ಲಿ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷರು ಆಡಳಿತ ನಡೆಸುತ್ತಿದ್ದಾರೆ. ಕಾಪು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇಲ್ಲಿ ಬಿಜೆಪಿಗೆ ಕೊರತೆ ಇರುವುದು ಒಂದು ಸದಸ್ಯ ಬಲ ಮಾತ್ರ. ಈಗ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಬಗಲಿಗೆ ಹಾಕಿಕೊಂಡಿದೆ.
ನಗರಸಭೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ. ಈ ದುರಾಡಳಿತಕ್ಕೂ ಜನತೆ ಒಂದು ರೀತಿಯಲ್ಲಿ ಈಗ ಉತ್ತರ ನೀಡಿದ್ದಾರೆ, ಮುಂದೆ ನಗರಸಭಾ ಚುನಾವಣೆಯಲ್ಲಿಯೂ ಉತ್ತರ ನೀಡಲಿದ್ದಾರೆ ಎಂದು ನಗರಸಭೆ ವಿಪಕ್ಷದ ಸದಸ್ಯ ಯಶ್‌ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದಾರೆ.”ಮಿಷನ್ 30’ನ್ನು ಮುಂದಿಟ್ಟುಕೊಂಡು ನಗರಸಭೆ ಚುನಾವಣೆಗೆ ಈಗಾಗಲೇ ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಮಾಜಿ ನಗರ ಸಮಿತಿ ಅಧ್ಯಕ್ಷ ರಾಘವೇಂದ್ರ ಕಿಣಿ ತಿಳಿಸಿದ್ದಾರೆ. 35 ಸದಸ್ಯಬಲದ ನಗರಸಭೆಯಲ್ಲಿ ಪ್ರಸ್ತುತ 22 ಕಾಂಗ್ರೆಸ್ ಮತ್ತು 13 ಮಂದಿ ಬಿಜೆಪಿ ಸದಸ್ಯರಿದ್ದಾರೆ.