ಉಡುಪಿ : ಯುವ ಮೋರ್ಚಾದಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಮುಂದೊಂದು ದಿನ ನೀವು ಕೂಡ ಪ್ರಧಾನಿ ನರೇಂದ್ರ ಮೋದಿಯಂತ ವ್ಯಕ್ತಿ ಆಗಬಹುದು. ಈಗಿರುವ ನಾಯಕರೆಲ್ಲರೂ ಯುವ ಮೋರ್ಚಾದಲ್ಲಿ ಕೆಲಸ ಮಾಡಿದವರು ಎಂಬ ನೆನಪು ನಿಮಗಿರಲಿ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾದ ಅಧ್ಯಕ್ಷ , ಸಂಸದ ಪ್ರತಾಪ ಸಿಂಹ ಹೇಳಿದರು.
ಅವರು ಜ.12ರಂದು ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಯುವ ಮೋರ್ಚಾದ ವಿಶೇಷ ಸಭೆಯಲ್ಲಿ ಮಾತನಾಡಿದರು.
ದೇಶದ 19 ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಮುಂದೆ ಕರ್ನಾಟಕ ಸೇರಿ 23 ರಾಜ್ಯ ಬಿಜೆಪಿ ಆಡಳಿತ ನಡಸಬೇಕು ಎಂಬುದೆ ನಮ್ಮ ಗುರಿಯಾಗಿದೆ. ಕಾಂಗ್ರೆಸ್ ಮುಕ್ತ ಕರಾವಳಿ ಜಿಲ್ಲೆಯಾಗಬೇಕು. ರಾಜ್ಯದಲ್ಲಿ ಗೃಹಮಂತ್ರಿಯೋರ್ವರು ಪರಿಶುದ್ಧವಾಗಿ ಕೆಲಸ ನಿರ್ವಹಿಸಿದಿದ್ದರೆ ಅದು ಡಾ| ವಿ.ಎಸ್.ಆಚಾರ್ಯರು ಮಾತ್ರ ಎಂದು ರಾಜ್ಯದ ಪೊಲೀಸ್ ಇಲಾಖೆ ಹೇಳುತ್ತಿದೆ ಎಂದಾದರೆ ಕಾಂಗ್ರೆಸ್ ಸರಕಾರದಲ್ಲಿ ಗೃಹ ಇಲಾಖೆ ಎಷ್ಟು ಕೀಳು ಮಟ್ಟದ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಿ ಎಂದರು.
ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಯುವಮೋರ್ಚಾದ ಉಪಾಧ್ಯಕ್ಷ ಶಿವರಂಜನ್, ಕಾರ್ಯಕಾರಿಣಿ ಸದಸ್ಯ ರಂಜಿತ್ ಸಾಲ್ಯಾನ್ ಉಪಸ್ಥಿತರಿದ್ದರು. ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಶ್ರೀಶ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಯುವ
ಮೋರ್ಚಾ ಮಂಡಲ ಅಧ್ಯಕ್ಷ ಕರುಣಾಕರ ಕೋಟ್ಯಾನ್ ವಂದಿಸಿದರು.