Advertisement

ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್‌ ನ ಸ್ವೀಪರ್ ಪತ್ನಿಯೇ ಬ್ಲಾಕ್‌ ನ ಮುಖ್ಯಸ್ಥೆಯಾಗಿ ಅಧಿಕಾರ

04:09 PM Jul 15, 2021 | Team Udayavani |

ಬಾಲಿಯಖೇರಿ : ಉತ್ತರ ಪ್ರದೇಶದ ಸಹರಾನ್‌ ಪುರದ ಬಾಲಿಯಖೇರಿ  ಬ್ಲಾಕ್‌ ನ ಮುಖ್ಯಸ್ತೆಯಾಗಿ ಸೋನಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ತಿಂಗಳ ಆರಂಭದಲ್ಲಿ ನಡೆದ ಬ್ಲಾಕ್ ಮುಖ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿ ಸದಸ್ಯರಾಗಿದ್ದ ಸೋನಿಯಾ ಇತ್ತೀಚೆಗೆ ಮುಖ್ಯಸ್ಥೆಯಾಗಿ ಆಯ್ಕೆಗೊಂಡಿದ್ದಾರೆ.

ಇದನ್ನೂ ಓದಿ : ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್

ಸೋನಿಯಾ, ಬಾಲಿಯಖೇರಿಯ 55 ನೇ ವಾರ್ಡ್‌ನಿಂದ ಬಿಡಿಸಿ ಅಥವಾ ಬ್ಲಾಕ್ ಡೆವೆಲಪ್ ಮೆಂಟ್ ಕೌನ್ಸಿಲ್  ಚುನಾವಣೆಗೆ ಸ್ಪರ್ಧಿಸಿದ್ದರು. ಸೋನಿಯಾ ಬಿಡಿಸಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ಈ ತಿಂಗಳು ಬ್ಲಾಕ್ ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಮುಖೇಶ್ ಚೌಧರಿ 26 ವರ್ಷದ ವಿದ್ಯಾವಂತೆ ಸೋನಿಯಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿದ್ದರು. ಬಾಲಿಯಖೇರಿ ಬ್ಲಾಕ್ ಮುಖ್ಯಸ್ಥರ ಹುದ್ದೆಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗಕ್ಕೆ ಮೀಸಲಾತಿ ಅಡಿಯಲ್ಲಿ ಸೋನಿಯಾ ಅಧಕಾರ ವಹಿಸಕೊಂಡಿದ್ದಾರೆ.

Advertisement

ಬ್ಲಾಕ್‌ ಸ್ವೀಪರ್ ಪತ್ನಿ ಬ್ಲಾಕ್ ನ ಮುಖ್ಯಸ್ಥೆ

ನಲ್ಹೆರಾ ಗುಜ್ಜರ್ ಗ್ರಾಮದ ನಿವಾಸಿ ಸುನಿಲ್, ಬಾಲಿಯಖೇರಿ ಡೆವಲಪ್‌ ಮೆಂಟ್ ಬ್ಲಾಕ್‌ ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದೇ ಬ್ಲಾಕ್ ನ ಮುಖ್ಯಸ್ಥರಾಗಿ ಸುನಿಲ್ ಪತ್ನಿ ಸೋನಿಯಾ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಬಗ್ಗೆ ಸುಲಿಲ್ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಸೋನಿಯಾ ಬ್ಲಾಕ್ ಮುಖ್ಯಸ್ಥರಾಗುತ್ತಾರೆಂದು ನಾನು ಎಂದು ಭಾವಿಸಿರಲಿಲ್ಲ. ಸಂತಸವಾಗುತ್ತಿದೆ. ಆಕೆಯ ಪ್ರೀತಿ ಹಾಗೂ ಬೆಂಬಲ ಮಾತ್ರ ನಾನು ನೀಡಬಲ್ಲೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಪಂಜಾಬ್ ಸಿಂಗ್ ದ್ವಯರ ವೈಮನಸ್ಸಿಗೆ ಕಾಂಗ್ರೆಸ್ ಹೈಕಮಾಂಡ್ ಮುಲಾಮು..!

Advertisement

Udayavani is now on Telegram. Click here to join our channel and stay updated with the latest news.

Next