Advertisement

Karnataka ಬಿಜೆಪಿಯ ಅತಿವೃಷ್ಟಿ ಅಧ್ಯಯನ; ರಾಜ್ಯಪಾಲರಿಗೆ ಅಂತಿಮ ವರದಿ

11:53 PM Jul 29, 2024 | Team Udayavani |

ಬೆಂಗಳೂರು: ಅತಿವೃಷ್ಟಿ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಕೈಗೊಳ್ಳಲು 6 ತಂಡಗಳನ್ನು ರಚಿಸಿರುವ ಬಿಜೆಪಿ, ಮಂಗಳವಾರದಿಂದ 3 ದಿನಗಳ ಕಾಲ ಅಧ್ಯಯನ ನಡೆಸಲಿದೆ.

Advertisement

ನೆರೆಪೀಡಿತ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಬಿಜೆಪಿ ಕೂಡ ಅಧ್ಯಯನ ತಂಡಗಳನ್ನು ರಚಿಸಿದ್ದು, ಮಂಗಳವಾರದಿಂದಲೇ ಅಧ್ಯಯನಕ್ಕೆ ಮುಂದಾಗಲಿದೆ.

ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌, ಉಪನಾಯಕ ಅರವಿಂದ ಬೆಲ್ಲದ್‌, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹಿರಿಯ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಡಿಸಿಎಂಗಳಾದ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಬಿ. ಶ್ರೀರಾಮುಲು ನೇತೃತ್ವದಲ್ಲಿ 6 ಪ್ರತ್ಯೇಕ ತಂಡಗಳಿರಲಿವೆ. ಶುಕ್ರವಾರವೇ ಎಲ್ಲ ತಂಡಗಳೂ ಪಕ್ಷಕ್ಕೆ ಪ್ರತ್ಯೇಕ ವರದಿ ನೀಡಲಿವೆ.

ರಾಜ್ಯಪಾಲರಿಗೆ ಅಂತಿಮ ವರದಿ
ಈ ತಂಡಗಳು ವಸ್ತುಸ್ಥಿತಿ ಅಧ್ಯಯನ ನಡೆಸಿ, ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಸರಕಾರ ಸಕಾಲದಲ್ಲಿ ಸ್ಪಂದಿಸಿಲ್ಲದಿದ್ದರೆ ಅದರ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಪರಿಹಾರ ಕಾಮಗಾರಿ ಕೈಗೊ ಳ್ಳಲು ಸೂಚಿಸಲಿದ್ದು, ವರದಿಯಲ್ಲಿ ಈ ಅಂಶಗಳನ್ನುಉಲ್ಲೇಖಿಸಿ 6 ತಂಡ ಗಳ ವರದಿಯನ್ನು ಒಟ್ಟುಗೂಡಿಸಿ ರಾಜ್ಯ ಪಾಲರಿಗೆ ಸಲ್ಲಿಸಲು ನಿರ್ಧರಿಸಿದೆ. ಆರ್‌. ಅಶೋಕ್‌ ತಂಡ ದ.ಕ., ಉಡುಪಿ ಕಡೆ  ಸಮೀಕ್ಷೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next