Advertisement
ಇದನ್ನೂ ಓದಿ:ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರನ ಹತ್ಯೆ ; 6 ಮಂದಿ ಉಗ್ರರ ಬಂಧನ
Related Articles
Advertisement
ಶನಿವಾರ ನಸುಕಿನ ವೇಳೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರನ್ನು ಚುನಾವಣಾ ಆಯೋಗ ಘೋಷಿಸಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿಯ ಪಿಯೂಷ್ ಗೋಯಲ್, ರಾಜ್ಯದ ಮಾಜಿ ಸಚಿವ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಜಯ್ ರಾವತ್, ಎನ್ ಸಿಪಿಯ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್ ನ ಇಮ್ರಾನ್ ಪ್ರತಾಪ್ ಘರ್ಹಿ ಜಯಗಳಿಸಿದ್ದಾರೆ.
ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ 3ರಲ್ಲಿ ಜಯಗಳಿಸಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ರಣದೀಪ್ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಜಯ ಸಾಧಿಸಿದ್ದು, ಬಿಜೆಪಿಯ ಘನಶ್ಯಾಮ್ ತಿವಾರಿ ಗೆಲುವು ಸಾಧಿಸಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.
ಬಿಜೆಪಿಯ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಧ್ಯಮ ದೊರೆ ಸುಭಾಶ್ ಚಂದ್ರ ಎರಡನೇ ಪ್ರಾಶಸ್ತ್ಯದ ಮತ ಪಡೆಯಲು ವಿಫಲರಾಗುವ ಮೂಲಕ ಪರಾಜಯಗೊಂಡಿದ್ದಾರೆ.
ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಮುಖಭಂಗ:
ಹರ್ಯಾಣದಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದ್ದು, ಹಿರಿಯ ಮುಖಂಡ ಅಜಯ್ ಮಕೇನ್ ಸೋಲನ್ನನುಭವಿಸಿದ್ದಾರೆ. ಹರ್ಯಾಣದಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಕೃಷ್ಣ ಪನ್ವಾರ್ ಮತ್ತು ಬಿಜೆಪಿ, ಜೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಜಯಗಳಿಸಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.
ಕರ್ನಾಟಕದಲ್ಲಿ ಬಿಜೆಪಿಯ ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೇಹರ್ ಸಿಂಗ್ ರಾಜ್ಯಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ನ ಜೈರಾಂ ರಮೇಶ್ ಜಯಸಾಧಿಸಿದ್ದಾರೆ.
15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳ ಪೈಕಿ 41 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇನ್ನುಳಿದಂತೆ ಉತ್ತರಪ್ರದೇಶದ 11, ಮಹಾರಾಷ್ಟ್ರದ 6, ತಮಿಳುನಾಡಿನ 6, ಬಿಹಾರದ 5, ಕರ್ನಾಟಕ 04, ರಾಜಸ್ಥಾನ 04, ಆಂಧ್ರಪ್ರದೇಶ 04, ಮಧ್ಯಪ್ರದೇಶ 3, ಒಡಿಶಾ 03, ಪಂಜಾಬ್ 02, ಜಾರ್ಖಂಡ್ 02, ಹರ್ಯಾಣ 02, ಛತ್ತೀಸ್ ಗಢ 02, ತೆಲಂಗಾಣ 01, ಉತ್ತರಾಖಂಡ್ 01 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.