Advertisement

ಪ್ರಚಾರದ ವೇಳೆ ದೋಸೆ ಮಾಡಿ, ಮಗುವನ್ನು ಆಡಿಸಿದ ನಟಿ ಖುಷ್ಬು

04:17 PM Mar 28, 2021 | Team Udayavani |

ತಮಿಳುನಾಡು : ಚುನಾವಣೆ ಪ್ರಚಾರ ಶುರುವಾಗುತ್ತಿದ್ದಂತೆ ರಾಜಕೀಯ ನಾಯಕರು ಜನರಿಗೆ ತುಂಬಾ ಹತ್ತಿರವಾಗುತ್ತಾರೆ. ರೋಡ್ ಶೋ, ಗ್ರಾಮ ವಾಸ್ತವ್ಯ ಸೇರಿದಂತೆ ಹಲವಾರು ಪ್ರಚಾರದ ಗಿಮಿಕ್ ಗಳನ್ನು ಮಾಡುತ್ತಾರೆ. ಇದೇ ಹಿನ್ನೆಲೆಯಲ್ಲಿ ನಟಿ ಖುಷ್ಬು ಕೂಡ ಪ್ರಚಾರದ ವೇಳೆ ದೋಸೆ ಮಾಡಿ ಗಮನ ಸೆಳೆದಿದ್ದಾರೆ.

Advertisement

content-img

ತಮಿಳುನಾಡಿನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ, ನಿನ್ನೆ ಮಾ.27 ರಂದು ಪ್ರಚಾರ ಮಾಡುವ ವೇಳೆ ಹೋಟೆಲ್ ಒಂದರಲ್ಲಿ ದೋಸೆ ಮಾಡಿ ಗಮನ ಸೆಳೆದಿದ್ದಾರೆ.

ಇಷ್ಟೆ ಅಲ್ಲದೆ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ನಟಿ ಅಲ್ಲಿನ ಮತದಾರರೊಬ್ಬರ ಪುಟ್ಟ ಮಗುವನ್ನು ತೋಳಿನಲ್ಲಿ ಎತ್ತಿ ಆಟವಾಡಿಸಿದ್ದಾರೆ. ಹೀಗೆ ದೋಸೆ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಇನ್ನು ತಮಿಳುನಾಡಿನಲ್ಲಿ 234 ವಿಧಾನಸಭೆಯ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಎಐಎಡಿಎಂಕೆ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಏಪ್ರಿಲ್ 6ರಂದು ಮತದಾನ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.