Advertisement

ಬಿಜೆಪಿ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ: ರಾಜಕೀಯಕ್ಕೆ ವಿದಾಯ ಘೋಷಿಸಿದ ಸಂಸದ ಹರ್ಷವರ್ಧನ್

03:38 PM Mar 03, 2024 | Team Udayavani |

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಸಂಸದ ಡಾ.ಹರ್ಷವರ್ಧನ್ ಭಾನುವಾರ(ಮಾ.3 ರಂದು) ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.

Advertisement

ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಶನಿವಾರ (ಮಾ.2 ರಂದು) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

“ಮೂವತ್ತು ವರ್ಷಗಳ ಚುನಾವಣಾ ವೃತ್ತಿಜೀವನದ ನಂತರ, ನಾನು ಎಲ್ಲಾ ಐದು ವಿಧಾನಸಭಾ ಮತ್ತು ಎರಡು ಸಂಸತ್ತಿನ ಚುನಾವಣೆಗಳನ್ನು ಉತ್ತಮ ಅಂತರದಿಂದ ಗೆದ್ದು, ಪಕ್ಷ ಸಂಘಟನೆ ಮತ್ತು ರಾಜ್ಯ ಮತ್ತು ಕೇಂದ್ರದ ಸರ್ಕಾರಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಹೊಂದಿದ್ದೇನೆ. ನಾನು ಮುಂದುವರಿಯುತ್ತೇನೆ, ನನಗೆ ಕಾಯಲು ಸಾಧ್ಯವಿಲ್ಲ. ನಾನು ಮುಂದುವರಿಯುತ್ತೇನೆ,  ನನಗೆ ಇನ್ನು ಕಾಯಲು ಸಾಧ್ಯವಿಲ್ಲ. ಪೂರ್ತಿ ಮಾಡುವ ಭರವಸೆಗಳನ್ನು ಹೊಂದಿದ್ದೇನೆ. ಮೈಲುಗಳನ್ನು ಕ್ರಮಿಸಿಬೇಕಿದೆ. ನನಗೊಂದು ಕನಸಿದೆ. ಕೃಷ್ಣಾದಲ್ಲಿರುವ ನನ್ನ ಇಎನ್ಟಿ ಕ್ಲಿನಿಕ್ ನಗರವೂ ​​ನನ್ನ ವಾಪಸಾತಿಗೆ ಕಾಯುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಸಂಸದ ಹರ್ಷವರ್ಧನ್ ವೃತ್ತಿಯಲ್ಲಿ ವೈದ್ಯರಾಗಿದ್ದು, ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಅವರು ಮತ್ತೆ ವೈದ್ಯ ವೃತ್ತಿಗೆ ಮರಳುವುದಾಗಿ ಹೇಳಿದ್ದಾರೆ. ಕೇಂದ್ರದಲ್ಲಿ ಅವರು ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಾಲ್ವರು ಹಾಲಿ ಸಂಸದರಾದ ಪರ್ವೇಶ್ ವರ್ಮಾ, ರಮೇಶ್ ಬಿಧುರಿ, ಮೀನಾಕ್ಷಿ ಲೇಖಿ ಮತ್ತು ಹರ್ಷವರ್ಧನ್ ಅವರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಿದೆ.

Advertisement

ಚಾಂದನಿ ಚೌಕ್ ಕ್ಷೇತ್ರದಿಂದ ಹರ್ಷವರ್ಧನ್ ಅವರನ್ನು ಕೈಬಿಟ್ಟು ಪ್ರವೀಣ್ ಖಂಡೇಲವಾಲ್‌ರನ್ನ‌ ಕಣಕ್ಕಿಳಿಸಿದೆ. ಇದಾದ ಬಳಿಕ ಹರ್ಷವರ್ಧನ್‌ ರಾಜಕೀಯವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next