Advertisement
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದ ಹಿನ್ನೆಲೆಯಲ್ಲಿ ಮಂಗಳೂರು ಪುರಭವನದಲ್ಲಿ ಬುಧವಾರ ಆಯೋಜಿಸಲಾದ “ಸಬ್‌ಕಾ ಸಾಥ್ ಸಬ್ ಕಾ ವಿಕಾಸ್’ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಸಂಸದ ನಳಿನ್ ಕುಮಾರ್ ಕಟೀಲು ಮಾತ ನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ-ಯೋಚನೆಗಳ ಮುಖೇನವಾಗಿ ಭಾರತ ಇಂದು ವಿಶ್ವದ ಎತ್ತರಕ್ಕೆ ಬೆಳೆದು ನಿಂತಿದೆ. ಗ್ರಾಮ ಗ್ರಾಮ ಗಳಲ್ಲಿ ಆಧುನಿಕ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಭಾರತವನ್ನು ಸಮೃದ್ಧಗೊಳಿಸುವ ಕಾರ್ಯ ನಡೆಯುತ್ತಿದೆ. ದ.ಕ. ಜಿಲ್ಲೆಯ ಅಭಿ ವೃದ್ಧಿಗಾಗಿ ಮೋದಿ ಸರಕಾರದಿಂದ ನಿರೀಕ್ಷೆಗೂ ಮೀರಿ ಅನುದಾನ ಬಂದಿದೆ. ಈ ಮೂಲಕ ಮುಂದಿನ ಜಗದ್ಗುರು ಭಾರತದಲ್ಲಿ ದ.ಕ. ಜಿಲ್ಲೆ ಭಾರತದ ನಂ. 1 ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
Advertisement
ದ.ಕ. ಜಿಲ್ಲೆಗೆ 1,29,365 ಕೋ.ರೂ.ದ.ಕ. ಜಿಲ್ಲೆಯ ಅಭಿ ವೃದ್ಧಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ದೊರಕಿದೆ. ರೈಲ್ವೇಗೆ 1,243 ಕೋ. ರೂ., ರಾ. ಹೆದ್ದಾರಿಗಾಗಿ 7,456 ಕೋಟಿ ರೂ., ಸ್ಮಾರ್ಟ್ ಸಿಟಿ ಯೋಜನೆಗೆ ಅನುದಾನ, ದೇಶದಲ್ಲಿಯೇ ಮೊದಲ ಬಾರಿಗೆ ಬಿ.ಸಿ. ರೋಡ್-ಅಡ್ಡಹೊಳೆ ಕಾಂಕ್ರೀಟ್ ರಸ್ತೆ ಹಾಗೂ ಮಂಗಳೂರು-ಬೆಂಗಳೂರು ಹೈಸ್ಪೀಡ್ ರಸ್ತೆಗೆ ಅನುದಾನ ಸಹಿತ ಒಟ್ಟು ಮೂರು ವರ್ಷಗಳ ಅವಧಿಗೆ ಕೇಂದ್ರದಿಂದ 1, 29,365 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ನಳಿನ್ ಕುಮಾರ್ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ನಾಗರಾಜ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಎನ್. ಯೋಗೀಶ್ ಭಟ್, ರುಕ್ಮಯ ಪೂಜಾರಿ, ಮೋನಪ್ಪ ಭಂಡಾರಿ, ಮುಖಂಡರಾದ ಬಾಲಕೃಷ್ಣ ಭಟ್, ಸುಲೋಚನಾ ಭಟ್, ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ಸುದರ್ಶನ್ ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಕಿಶೋರ್ ರೈ ವಂದಿಸಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ರೂಪ
ಕೇಂದ್ರ ಸಚಿವ ಪಿ.ಪಿ. ಚೌಧರಿ ಮಾತನಾಡಿ, ದೇಶದಲ್ಲಿ ಈಗಾಗಲೇ ನಗರ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದ್ದರೂ ಗ್ರಾಮೀಣ, ಆದಿವಾಸಿ, ಮರು ಭೂಮಿ ಮೊದಲಾದ ಪ್ರದೇಶ ಗಳಲ್ಲಿ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ಯಿಂದ ಶಿಕ್ಷಣದ ಗುಣಮಟ್ಟ ದಲ್ಲಿ ಕೊರತೆ ಯನ್ನು ಕಾಣಲಾಗುತ್ತಿದೆ. ಇದ ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿಷನ್ ಆಗಿ ರುವ ಡಿಜಿಟಲ್ ಇಂಡಿಯಾದಡಿ 3ಡಿ ಆ್ಯನಿ ಮೇಶನ್ ಆಧಾರಿತ ಪಠ್ಯಕ್ರಮ ವನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸ ಲಾಗುತ್ತಿದೆ. ಈ ಬಗ್ಗೆ ಮುಂದಿನ ಹಂತ ದಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಗ್ರಾ.ಪಂ.ಗಳಿಗೆ ಹೈಸ್ಪೀಡ್ ವೈಫೈ ಹಾಟ್‌ಸ್ಪಾಟ್
ಡಿಜಿಟಲ್ ಕ್ಷೇತ್ರದ ವಿಸ್ತಾರವನ್ನು ಶಿಕ್ಷಣದ ಜತೆಗೆ ಆರೋಗ್ಯ ಹಾಗೂ ಕೃಷಿ ಕ್ಷೇತ್ರಕ್ಕೂ ವ್ಯಾಪಿಸುವ ಮೂಲಕ ಮನೆಗಳಲ್ಲಿಯೇ ಚಿಕಿತ್ಸೆ, ವೈದ್ಯರ ಸಲಹೆ ಪಡೆಯುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಕೃಷಿಯಲ್ಲಿ ತಂತ್ರ ಜ್ಞಾನದ ಅಳವಡಿಕೆಯ ಮೂಲಕ ಕೃಷಿಕರ ಬದುಕನ್ನು ಹಸನುಗೊಳಿಸಲಾಗುವುದು. ಡಿಜಿಟಲ್ ಇಂಡಿಯಾ ದಡಿ ಈಗಾಗಲೇ ಒಂದು ಲಕ್ಷ ಗ್ರಾ.ಪಂ.ಗಳಲ್ಲಿ ಹೈಸ್ಪೀಡ್ ವೈಫೈ ಹಾಟ್‌ಸ್ಪಾಟ್ ಸಂಪರ್ಕ ವನ್ನು ಒದಗಿಸಲಾಗಿದೆ. ಮುಂದಿನ ದಿನ ಗಳಲ್ಲಿ 1.50 ಲಕ್ಷ ಗ್ರಾ.ಪಂ.ಗಳಿಗೆ ಈ ವ್ಯವಸ್ಥೆ ಯನ್ನು ವಿಸ್ತರಿಸಲಾಗುವುದು. ಮುಂದಿನ ಎರಡು ವರ್ಷ ಗಳಲ್ಲಿ ಮೋದಿಯವರ ಡಿಜಿಟಲ್ ಇಂಡಿಯಾದ ಕನಸು ದೇಶದ “ಗೇಮ್ ಚೇಂಜರ್’ ಆಗಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವ ಪಿ.ಪಿ. ಚೌಧರಿ ತಿಳಿಸಿದರು.