Advertisement

BJP ಯ ನಕಲಿ ರಾಷ್ಟ್ರವಾದ ಬಯಲು: ಖರ್ಗೆ

08:35 PM Sep 30, 2023 | Team Udayavani |

ನವದೆಹಲಿ: ವಿಶೇಷಚೇತನ ಯೋಧರ ನೂತನ ಪಿಂಚಣಿ ನಿಯಮಗಳು ಬಿಜೆಪಿಯ ನಕಲಿ ರಾಷ್ಟ್ರವಾದವನ್ನು ಮತ್ತೆ ಬಹಿರಂಗ ಪಡಿಸಿದೆ. ಹೀಗೆಂದು ಅಖೀಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.

Advertisement

ಪಿಂಚಣಿ ನಿಯಮಗಳ ಬದಲಾವಣೆ ಕುರಿತಂತೆ ಟ್ವಿಟರ್‌ನಲ್ಲಿ ಖರ್ಗೆ ಪೋಸ್ಟ್‌ ಮಾಡಿದ್ದು, “ಬಿಜೆಪಿಯ ಈ ನಡೆಯು ನಕಲಿ ರಾಷ್ಟ್ರವಾದವನ್ನು ಬಹಿರಂಗ ಪಡಿಸುತ್ತಿದೆ. ಸೈನಿಕರು ಹಾಗೂ ಸೇನೆಯ ಮಾಜಿ ಸಿಬ್ಬಂದಿಯ ಕಲ್ಯಾಣದ ವಿರುದ್ಧ ಕೆಲಸ ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗಲೂ ನಿರತವಾಗಿದೆ. ಪ್ರಸಕ್ತ ಶೇ.40ರಷ್ಟು ಯೋಧರು ವೈದ್ಯಕೀಯ ಕಾರಣಗಳಿಂದ ಸೇವೆ ಸಲ್ಲಿಸಲು ಸಾಧ್ಯವಿಲ್ಲವೋ ಅಂಥವರಿಗೆ ನಿಯಮ ತೊಡಕಾಗಲಿದ್ದು, ಈ ಹಿಂದಿನ ಮಾನದಂಡಗಳು, ನಿಯಮಗಳು, ತೀರ್ಪುಗಳನ್ನೂ ಉಲ್ಲಂ ಸುತ್ತವೆ. 2019ರಲ್ಲಿಯೂ ವಿಶೇಷಚೇತನ ಯೋಧರ ಪಿಂಚಣಿ ಮೇಲೆ ತೆರಿಗೆ ವಿಧಿಸುವುದಾಗಿ ಘೋಷಿಸುವ ಮೂಲಕ ಮೋದಿ ಸರ್ಕಾರ ಸೈನಿಕರಿಗೆ ದ್ರೋಹ ಎಸಗಿತ್ತು ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು, ನೂತನ ಪಿಂಚಣಿ ನಿಯಮದ ವಿರುದ್ಧ ಅಖೀಲ ಭಾರತ ಮಾಜಿ ಸೈನಿಕರ ಕಲ್ಯಾಣ ಸಂಘ ಕೂಡ ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next