ಕಾಗವಾಡ: ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಪಕ್ಷ ಅ ಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನುಅಧಿಕಾರಕ್ಕೆ ತಂದರೆ ಅಭಿವೃದ್ಧಿಗೆಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಉಸ್ತುವಾರಿ ಸಂತೋಷ ಲಾಡ್ ಹೇಳಿದರು.
ಅವರು ರವಿವಾರ ಐನಾಪುರ ಪಟ್ಟಣದಲ್ಲಿ ಪುರಸಭೆ ಹಾಗೂಪಪಂ ಚುನಾವಣೆ ಅಂಗವಾಗಿಕರೆದಿದ್ದ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದುರಾಡಳಿತದಿಂದ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ.ಮೊನ್ನೆ ನಡೆದ ವಿಧಾನ ಪರಿಷತ್‌ಚುನಾವಣೆಯಲ್ಲಿ ಹಣದ ಹೊಳೆಯನ್ನೇಹರಿಸಿ ಚುನಾವಣೆಯನ್ನು ನಡೆಸಿದ್ದರು.ಅದೇ ರೀತಿ ಪುರಸಭೆ ಹಾಗೂಪಪಂ ಚುನಾವಣೆಗಳನ್ನು ನಡೆಸಲುಬಿಜೆಪಿ ಹುನ್ನಾರ ನಡೆಸಿದೆ. ಇಂಥದುರಾಡಳಿತದ ಬಿಜೆಪಿಗೆ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತವಾಗಿ ಚುನಾವಣೆಯನ್ನು ಎದುರಿಸಿ ತಕ್ಕ ಪಾಠ ಕಲಿಸಬೇಕೆಂದರು.
ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದೊಂದೇ ಬಿಜೆಪಿಯಸಾಧನೆಯಾಗಿದೆ. ಅದನ್ನು ಬಿಟ್ಟರೆಅಭಿವೃದ್ಧಿ ಶೂನ್ಯ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗ್ಯಾಸ್, ಪೆಟ್ರೋಲ್,ಡೀಸೆಲ್ ಸೇರಿದಂತೆ ಪ್ರತಿಯೊಂದುವಸ್ತುಗಳ ಬೆಲೆಯನ್ನು ಹೆಚ್ಚಿಸುವಮೂಲಕ ಜನಸಾಮಾನ್ಯರ ಬದುಕನ್ನುಕಸಿದುಕೊಂಡಿದ್ದಾರೆ. ಇಂಥ ಭ್ರಷ್ಟಸರ್ಕಾರಕ್ಕೆ ಪುರಸಭೆ ಹಾಗೂ ಪಟ್ಟಣಪಂಚಾಯತ್ ಚುನಾವಣೆಯಲ್ಲಿತಕ್ಕ ಪಾಠ ಕಲಿಸುವ ಮೂಲಕ ಕಿತ್ತೆಸೆಯಬೇಕೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್‌ಚಿಂಗಳೆ, ಕೆಪಿಸಿಸಿ ಸದಸ್ಯ ದಿಗ್ವಿಜಯಪವಾರ ದೇಸಾಯಿ, ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ವಿಜಯಕುಮಾರ ಅಕಿವಾಟೆ,ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಗಾಣಿಗೇರ, ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ, ಸುಭಾಷಗೌಡಪಾಟೀಲ, ರಾಜುಗೌಡ ಪಾಟೀಲ, ಪ್ರವೀಣ(ಪುಟ್ಟು) ಗಾಣಿಗೇರ, ಕುಮಾರಅಪರಾಜ, ಅರುಣ ಗಾಣಿಗೇರ,ಬಾಳಾಸಾಹೇಬ ದಾನೊಳ್ಳಿ, ಗಜಾನನಯರಂಡೋಲಿ, ಸಂಜಯ ಕುಚನೂರೆ,ಸಂಜು ಭೀರಡಿ, ಆದಿನಾಥ ದಾನೊಳ್ಳಿ,ವಿಶ್ವನಾಥ ನಾಮದಾರ, ದಾದಾಸಾಹೇಬಜಂತೆಣ್ಣವರ, ಗೋಪಾಲ ಮಾನಗಾಂವೆ,ಗುರುರಾಜ ಮಡಿವಾಳರ, ರಮಜಾನಮುಜಾವರ, ಮಹಿಬೂಬ ನನದಿ,ಕುಮಾರ ಜಯಕರ, ಅನೂಪ ಶೆಟ್ಟಿ,ಸುರೇಶ ಅಡಿಸೇರಿ, ಸುನೀಲ ಪಾಟೀಲ,ಸುರೇಶ ಗಾಣಿಗೇರ, ಮುರಗೆಪ್ಪ ಮಹಾಜನ ಇನ್ನಿತರರಿದ್ದರು.
ಯಾರದೋ ಮನೆಯಲ್ಲಿ ಕುಳಿತು ಟಿಕೆಟ್ ಹಂಚಿಕೆಮಾಡುತ್ತಿಲ್ಲ. ಪಟ್ಟಣದ ಎಲ್ಲಮುಖಂಡರ ಅಭಿಪ್ರಾಯಪಡೆದು ಯೋಗ್ಯ ಹಾಗೂ ಭ್ರಷ್ಟಾಚಾರ ಮುಕ್ತ ಸೇವಾಮನೋಭಾವ ಹೊಂದಿದ ಜನಪರ ಯುವಕರನ್ನು ಕಣಕ್ಕಿಳಿಸುತ್ತಿದ್ದೇವೆ. ಈ ಬಾರಿ ಐನಾಪುರ ಪಪಂನಲ್ಲಿಕಾಂಗ್ರೆಸ್ ಪಕ್ಷದ ಅತಿಹೆಚ್ಚುಅಭ್ಯರ್ಥಿಗಳು ಆಯ್ಕೆಯಾಗುವಂತೆಪ್ರತಿಯೊಬ್ಬರೂ ಶ್ರಮಿಸಬೇಕು.
-ರಾಜು ಕಾಗೆ, ಮಾಜಿ ಶಾಸಕ
ರಾಜ್ಯ-ದೇಶದಲ್ಲಿ ಬಿಜೆಪಿಯಿಂದ ರೈತರಉದ್ಧಾರ ಸಾಧ್ಯವಿಲ್ಲ.ಇವರದ್ದು ಅದಾನಿ, ಅಂಬಾನಿಪರವಾಗಿರುವಂತ ಸರ್ಕಾರ.ಇಂಥವರಿಂದ ದೇಶಉದ್ಧಾರವಾಗಲು ಸಾಧ್ಯವಿಲ್ಲ.ಇವರನ್ನು ಹೀಗೆ ಆಡಳಿತ ನಡೆಸಲು ಬಿಟ್ಟರೆ ದೇಶದಲ್ಲಿ ಮುಂದೊಂದು ದಿನ ತಿನ್ನಲು ಅನ್ನ ಕೂಡ ಸಿಗುವುದು ಕಷ್ಟವಾಗುತ್ತದೆ.
-ರಾಜುಗೌಡ ಪಾಟೀಲ, ಕಾಂಗ್ರೆಸ್ ಮುಖಂಡ