Advertisement

Rumours ಬೆನ್ನಲ್ಲೇ ತಮಿಳಿಸೈ ಸೌಂದರರಾಜನ್ ಭೇಟಿ ಮಾಡಿದ ಅಣ್ಣಾಮಲೈ

07:38 PM Jun 14, 2024 | Team Udayavani |

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಶುಕ್ರವಾರ ಪಕ್ಷದ ಹಿರಿಯ ನಾಯಕಿ ಮತ್ತು ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

Advertisement

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ತೀರಾ ಕಳಪೆ ಪ್ರದರ್ಶನದ ನಂತರ ಉಭಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳ ಮಧ್ಯೆ ಈ ಭೇಟಿ ನಡೆದಿದೆ.

ಸಭೆಯ ನಂತರ, ಅಣ್ಣಾಮಲೈ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು “ಹಿರಿಯ ನಾಯಕಿಯರಲ್ಲಿ ಒಬ್ಬರು, ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆಯಾಗಿ ಉತ್ತಮವಾಗಿ ಕೆಲಸ ಮಾಡಿದ ಡಾ.ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿದುದು ನನಗೆ ಸಂತೋಷ ನೀಡಿದೆ. ಅವರ ರಾಜಕೀಯ ಅನುಭವ ಮತ್ತು ಸಲಹೆಗಳು ಪಕ್ಷದ ಬೆಳವಣಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ’ ಎಂದು ಬರೆದಿದ್ದಾರೆ.

ಲೋಕಸಭೆ ಚುನಾವಣೆಯ ನಂತರ, ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದರೆ ತಮಿಳುನಾಡಿನಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಬಹುದಿತ್ತು ಎಂದು ತಮಿಳಿಸೈ ಸೌಂದರರಾಜನ್ ಹೇಳಿದ್ದರು. ಬಿಜೆಪಿ-ಎಐಎಡಿಎಂಕೆ ದೂರವಾಗಲು ಅಣ್ಣಾಮಲೈ ಕಾರಣ ಎಂದು ಆರೋಪ ಮಾಡಿ ಎಐಎಡಿಎಂಕೆ ನಾಯಕರೊಬ್ಬರನ್ನು ಅವರು ಬಹಿರಂಗವಾಗಿ ಬೆಂಬಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next