ಮೈಸೂರು: ದೇಶದಲ್ಲಿ ಚೀನಾ ಆ್ಯಪ್‌ಗ್ಳನ್ನು ಬ್ಯಾನ್ ಮಾಡಿರುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ಬೀಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಈ 59 ಅಪ್ಲಿಕೇಶನ್‌ಗೆ ಹೂಡಿಕೆಯಾಗಿರುವ ಮೊತ್ತ ಬಹಳ ಕಡಿಮೆ. ಅದರಲ್ಲೂ 8 ಆ್ಯಪ್‌ಗ್ಳು ಪ್ರತಿ ಸ್ಮಾರ್ಟ್‌ಫೋನ್ ಗಳಲ್ಲೇ ಅಳವಡಿಕೆಯಾಗಿರುತ್ತದೆ. ಇವುಗಳನ್ನು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ.
ಪ್ರಧಾನಿ ಮೋದಿಗೆ ಚೀನಾ ಮೇಲೆ ದ್ವೇಷ ತೀರಿಸಿಕೊಳ್ಳಬೇಕಿದ್ದರೆ ಪೇಟಿಯಮ್, ಸ್ನಾಪ್ ಡೀಲ್, ಈ ಕಾಮರ್ಸ್ ಅಪ್ಲಿಕೇಷನ್‌ಗಳಾದ μÉಪ್‌ಕಾರ್ಟ್, ಸ್ವಿಗ್ಗಿಗಳನ್ನು ಬ್ಯಾನ್ ಮಾಡಲಿ. ಇವುಗಳೆಲ್ಲವೂ ನಮ್ಮ ದೇಶದಲ್ಲಿ ಲಕ್ಷಾಂತರ ಕೋಟಿಯಲ್ಲಿ ಹೂಡಿಕೆಯಾಗಿದೆ ಎಂದ ವಾಗ್ಧಾಳಿ ಮಾಡಿದರು. ಭಾರತದ ಈ ನಿರ್ಧಾರದಿಂದ ಚೀನಾ ಕೂಟ ಭಾರತದ ವೆಬ್‌ಸೈಟ್, ದಿನಪತ್ರಿಕೆಗಳು ಹಾಗೂ ಟಿವಿ ಚಾನಲ್‌ಗಳನ್ನು ಬ್ಯಾನ್ ಮಾಡಿದೆ.
ಇದರಿಂದ ಭಾರತಕ್ಕೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಚೀನಾದಿಂದ ಬರುವಂತ ಕಚ್ಚಾ ವಸ್ತುಗಳನ್ನು ನಂಬಿರುವ ಕೈಗಾರಿಕೆಗಳ ಪಾಡೇನು? ಇದರ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಕಿಡಿಕಾರಿದರು. ನಮ್ಮ ದೇಶದ ಪ್ರಮುಖ ಕಂಪನಿಗಳು ಚೀನಾದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿವೆ. ಮುಂದಿನ ದಿನಗಳಲ್ಲಿ ಚೀನಾ ನಮ್ಮ ದೇಶದ ಸಂಸ್ಥೆಗಳಿಗೆ ನಿರ್ಬಂಧ ಹೇರಿದರೆ ಅವರಿಗೆ ಪ್ರತ್ಯೇಕ ವ್ಯವಸ್ಥೆ ಏನು ಎಂದು ಪಶ್ನಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ವಕ್ತಾರೆ ಮಂಜುಳಾ ಮಾನಸ, ಮುಖಂಡ ಚಂದ್ರಶೇಖರ್, ವೆಂಕಟೇಶ್ ಇತರರಿದ್ದರು.
ಸ್ಯಾನಿಟೈಸರ್, ಮಾಸ್ಕ್ ಖರೀದಿಯಲ್ಲಿ ಅಕ್ರಮ: ಸ್ಯಾನಿಟೈಸರ್ ಹಾಗೂ ಮಾಸ್ಕ್ ಖರೀದಿಯಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ಹಣ ಲೂಟಿ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 1,867 ವಿದ್ಯಾರ್ಥಿ ನಿಲಯಗಳಿಗೆ 500 ಎಂ.ಎಲ್ ಪ್ರಮಾಣದ ಸ್ಯಾನಿಟೈಸರ್ ಒಂದಕ್ಕೆ 600 ರೂ. ನೀಡಿದ್ದಾರೆ. ಮಾರುಕಟ್ಟೆ ಯಲ್ಲಿ ಇದು ಸಾಧ್ಯವೆ? ಈ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದರು.
ಸರ್ಕಾರ ಕೋವಿಡ್-19 ನಿಯಂತ್ರಿಸಲು 3,300 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ, ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್, ಸರ್ಜಿಕಲ್ ಗ್ಲೌಸ್, ಪರೀಕ್ಷೆ ಗ್ಲೌಸ್, ಆಮ್ಲಜನಕ ಸಿಲಿಂಡರ್ ಖರೀದಿ ಸೇರಿದಂತೆ ಇನ್ನಿತರ ಪರಿಕರಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಚಿ ವರ ಕೈವಾಡವಿದೆ ಎಂದು ಆರೋಪಿಸಿದರು.