ಹೊಸದಿಲ್ಲಿ: ದೆಹಲಿಯ ಆಪ್ ಸರ್ಕಾರವು ‘ವಿಕಾಸ್’ ಮಾದರಿಯನ್ನು ಅನುಸರಿಸುತ್ತಿದ್ದು, ಬಿಜೆಪಿಯ ವಿನಾಶದ ಮಾದರಿಯನ್ನು ಅನುಸರಿಸುತ್ತಿದೆ ಮತ್ತು ವಿರೋಧ ಪಕ್ಷಗಳನ್ನು ಹೊಡೆದುರುಳಿಸಿ ಸರ್ಕಾರಗಳನ್ನು ಉರುಳಿಸುತ್ತಿದೆ ಎಂದು ಶನಿವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
ಇತ್ತೀಚೆಗೆ ಮಂಡಿಸಿದ ಆಪ್ ಸರ್ಕಾರದ 2024-25ರ ಬಜೆಟ್ ಕುರಿತು ದೆಹಲಿ ಅಸೆಂಬ್ಲಿಯಲ್ಲಿ ಮಾತನಾಡಿ, ಇದು ಎಷ್ಟು ಉತ್ತಮ ಬಜೆಟ್ ಎಂದರೆ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಎಎಪಿ-ಕಾಂಗ್ರೆಸ್ ಒಕ್ಕೂಟವು ಗೆಲ್ಲುತ್ತದೆ ಎಂದು ಈಗಲೇ ಜನರು ಹೇಳುತ್ತಿದ್ದಾರೆ ಎಂದರು.
ತನಗೆ ನೀಡಿದ ಎಂಟು ಸಮನ್ಸ್‌ಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್, ನನ್ನನ್ನು ಬಂಧಿಸಲು ಮತ್ತು ಜೈಲಿಗೆ ಕಳುಹಿಸುವ ಮೂಲಕ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಯೋಜನೆ ಸಿದ್ಧಪಡಿಸಿದೆ. ನನಗೆ ನೀಡಿದ ಸಮನ್ಸ್‌ಗಳ ಸಂಖ್ಯೆಯನ್ನು ಹೊಂದಿಸಲು ದೆಹಲಿಯಲ್ಲಿ ಎಂಟು ಹೊಸ ಶಾಲೆಗಳನ್ನು ನಿರ್ಮಿಸುತ್ತೇನೆ. ನಾನು ದೇಶದ ದೊಡ್ಡ ಭಯೋತ್ಪಾದಕ ಎಂಬಂತೆ ಅವರು ನನಗೆ ಹಲವು ನೋಟಿಸ್‌ಗಳನ್ನು ಕಳುಹಿಸಿದ್ದಾರೆ”
ಎಂದು ಆಕ್ರೋಶ ಹೊರ ಹಾಕಿದರು.
“ಈ ಯುಗದಲ್ಲಿ ಭಗವಾನ್ ರಾಮನು ಇದ್ದಿದ್ದರೆ ಬಿಜೆಪಿಯು ಇಡಿ ಮತ್ತು ಸಿಬಿಐ ಅನ್ನು ಅವನ ಮನೆಗೆ ಕಳುಹಿಸಿ ಒಂದೋ ಬಿಜೆಪಿಗೆ ಅಥವಾ ಜೈಲಿಗೆ ಹೋಗಲು ಬಯಸುತ್ತೀಯಾ ಎಂದು ಬಂದೂಕಿನ ತುದಿಯಲ್ಲಿ ಕೇಳುತ್ತಿದ್ದರು” ಎಂದು ಬಿಜೆಪಿ ವಿರುದ್ಧ ತೀವ್ರ ಕಿಡಿ ಕಾರಿದರು.