Advertisement

ಮಂಗಳೂರು ಚಲೋ: ಹಲವು ನಾಯಕರು ವಶಕ್ಕೆ ;ಆಕ್ರೋಶ 

10:40 AM Sep 07, 2017 | Team Udayavani |

ಮಂಗಳೂರು: ಬಿಜೆಪಿ ಯುವಮೋರ್ಚಾ ಗುರುವಾರ ನಡೆಸುತ್ತಿರುವ ಮಂಗಳೂರು ಚಲೋ ರ‍್ಯಾಲಿ ಜ್ಯೋತಿ ಸರ್ಕಲ್‌ನಲ್ಲೇ ನಾಯಕರ ಖಂಡನಾ ಭಾಷಣದೊಂದಿಗೆ ರ‍್ಯಾಲಿ ಅಂತ್ಯವಾಗಿದ್ದು ಹೊರಡುವ ಮುನ್ನವೇ ಹಲವರನ್ನು ಬಂಧಿಸಿ ತಡೆ ಒಡ್ಡಲಾಗಿದೆ. ಬೈಕ್‌ ರ‍್ಯಾಲಿಯಾಗಲಿ ಪಾದಯಾತ್ರೆಯಾಗಲಿ ನಡೆಸುವುದಕ್ಕೆ ಪೊಲೀಸರು ಅವಕಾಶ ನಿಡಲಿಲ್ಲ.

Advertisement

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರೊಂದಿಗೆ ಹೊರಡಲು ಮುಂದಾಗ ಬಿ.ಎಸ್‌.ಯಡಿಯೂರಪ್ಪ, ಶೋಭಾ ಕರಂದ್ಲಾಜೆ , ಈಶ್ವರರಪ್ಪ, ಆರ್‌.ಅಶೋಕ್‌, ನಳಿನ್‌ ಕುಮಾರ್‌ ಕಟೀಲ್‌ , ಪ್ರತಾಪ್‌ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. 

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹಲವರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ತೀವ್ರ ವಾಗ್ವಾದ ನಡೆಯಿತು. 60 ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಕರೆದೊಯ್ಯಲಾಗಿದೆ.


ಜ್ಯೋತಿ ಸರ್ಕಲ್‌ನಲ್ಲೇ ಪ್ರತಿಭಟನಾ ಭಾಷಣ 

ಬಿಜೆಪಿ ನಾಯಕರು ನೆಹರು ಮೈದಾನಕ್ಕೆ ರ‍್ಯಾಲಿಯಲ್ಲಿ ತೆರಳಲು ಪೊಲೀಸರು ಅವಕಾಶ ನೀಡದ ಹಿನ್ನಲೆಯಲ್ಲಿ ಜ್ಯೋತಿ ಸರ್ಕಲ್‌ನಲ್ಲೇ ತೆರದ ವಾಹನದಲ್ಲೇ ವೇದಿಕೆ ನಿರ್ಮಿಸಲಾಗಿದ್ದು ಅಲ್ಲಿಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಷಣ ಮಾಮಾಡಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Advertisement

ನೆಹರೂ ಮೈದಾನದಲ್ಲಿ ಸಭೆ ಆಯೋಜಿಸುವುದಕ್ಕೆ ತೆರಳುತ್ತಿದ್ದ ಹಲವನ್ನು ವಶಕ್ಕೆ ಪಡೆಯಲಾಗಿದ್ದು, ನೂರಾರು ಸಂಖ್ಯೆಯ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಬೈಕ್‌ ಏರಿದ್ದ ಹಲವರಿಗೆ ತಡೆ ಒಡ್ಡಿದ್ದಾರೆ. ಪ್ರಮುಖ ನಾಯಕರನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ. 

ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದ್ದು,  ಸಮಾವೇಶವನ್ನು ಪೂರ್ವಾಹ್ನ 11ರಿಂದ ಮಧ್ಯಾಹ್ನ 2 ಗಂಟೆ ತನಕ ನಡೆಸ ಬಹುದು ಎಂದು ಆಯುಕ್ತರು ತಿಳಿಸಿದ್ದರು. 

ನಗರದ ಜ್ಯೋತಿ ಸರ್ಕಲ್‌ನಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣಗೆಗಳನ್ನು ಕೂಗಿದರು. ತೊಲಗಲಿ ತೊಲಗಲಿ ಹಿಂದೂ ವಿರೋಧಿ ಸರ್ಕಾರ ತೊಲಗಲಿ ಎನ್ನುವ ಘೋಷಣೆಗಳು ಕೇಳಿ ಬಂದವು. 

ಜ್ಯೋತಿ ಸರ್ಕಲ್‌ನಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು,ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನಗರ ಪ್ರವೇಶಿಸುವ ಪ್ರತಿಯೊಂದು ರಸ್ತೆಗಳಲ್ಲೂ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಟ್ರಾಫಿಕ್‌ನಲ್ಲಿ ಭಾರೀ ವ್ಯತ್ಯಯವಾಗಿದ್ದು  ಶಾಲಾ ಕಾಲೇಜುಗಳಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳಬೇಕಾಗಿದ್ದವರು ಪರದಾಡಬೇಕಾಯಿತು. ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸುಗಳ ಮಾರ್ಗಸೂಚಿ ಬದಲಾವಣೆ ಮಾಡಲಾಗಿದೆ. 

ರ‍್ಯಾಲಿಗೆ ಅನುಮತಿ ನಿರಾಕರಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. 

ಬೆಳಗ್ಗಿನ ನೆಹರೂ ಮೈದಾನದ ಚಿತ್ರಣ 

ಆರೆಸ್ಸೆಸ್‌ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ, ಕೆಎಫ್ ಡಿ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸ ಬೇಕು ಹಾಗೂ ಈ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿರುವ ಅರಣ್ಯ ಸಚಿವ ಬಿ. ರಮಾನಾಥ ರೈ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ “ಮಂಗಳೂರು ಚಲೋ’ ರ‍್ಯಾಲಿ ಹಮ್ಮಿಕೊಂಡಿದೆ.  ಬೈಕ್‌ ಜಾಥಾಗೆ ರಾಜ್ಯಾದ್ಯಂತ ಪೊಲೀಸರು ತಡೆ ಒಡ್ಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next