Advertisement

Lok Sabha Election; ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ: ವಿಜಯೇಂದ್ರ

01:50 AM Apr 21, 2024 | Team Udayavani |

ಬೆಳ್ತಂಗಡಿ: ದೇಶದ ಅಭಿವೃದ್ಧಿ ಹಾಗೂ ಸುರಕ್ಷೆ- ಇವೆರಡರ ದೃಷ್ಟಿಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರಕಾರ ಬರಬೇಕಿದೆ. ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಬಿಜೆಪಿ-ಜೆಡಿಎಸ್‌ ಪಕ್ಷಗಳು ಗೆಲ್ಲು ವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Advertisement

ದ.ಕ. ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಪರ ಮತಯಾಚನೆಗೆ ಆಗ ಮಿಸಿದ ಅವರು ಉಜಿರೆ ಎಸ್‌ಡಿಎಂ. ಕಾಲೇಜು ಬಳಿಯಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದವರೆಗೆ ಹಮ್ಮಿಕೊಂಡ ಬೃಹತ್‌ ರೋಡ್‌ ಶೋ ದಲ್ಲಿ ಭಾಗವಹಿಸಿ ಮಾತನಾಡಿದರು.

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿ, ಕಾಂಗ್ರೆಸ್‌ ಅವಧಿಯಲ್ಲಿ ಚಿಗುರೊಡೆದಿದ್ದ ನಕ್ಸಲರ ಸದ್ದಡಗಿಸಿದ ಧೀಮಂತ ಪ್ರಧಾನಿ ಮೋದಿ. ಕಾಂಗ್ರೆಸ್‌ಗೆ ರಾಜ್ಯ, ದೇಶದಲ್ಲಿ ಅಭ ದ್ರತೆ ಕಾಡು ತ್ತಿದೆ. ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿ ದ್ದಾಗ ಹಗರಣ ಮುಚ್ಚಿ ಹಾಕಿ ಕುಳಿತಿ ದ್ದವರು ಒಬ್ಬೊಬ್ಬರೇ ಇಂದು ಜೈಲು ಸೇರು ತ್ತಿರುವುದು ಇದಕ್ಕೆ ಕಾರಣ ಎಂದರು.

ಕ್ಯಾ| ಚೌಟರಿಗೆ 3 ಲಕ್ಷ ಅಧಿಕ ಮತ ಅಂತರದ ಗೆಲುವು
ದೇಶದ ಸುರಕ್ಷೆಯ ದೃಷ್ಟಿಯಿಂದ, ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಮತ್ತೂಮ್ಮೆ ಪ್ರಧಾನಿ ಮೋದಿ ಯವರ ಸಾರಥ್ಯದ ಎನ್‌ಡಿಎ ಕೂಟ ಬೇಕು ಎಂಬ ಗುಡು ಗು ಪ್ರತೀ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಮಾಡುತ್ತಿದ್ದಾರೆ. ಮೋದಿಜಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ಯಾವುದೇ ದುಷ್ಟ ಶಕ್ತಿಗಳು ತಡೆಯಲು ಸಾಧ್ಯವಿಲ್ಲ. ದ.ಕ. ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ನೋಡಿದರೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು ಖಚಿತ. ಪ್ರತಿಯೊಬ್ಬರು ನೀಡುವ ಒಂದೊಂದು ಮತವೂ ದೇಶ ರಕ್ಷಣೆಗೆ ನೀಡುವ ಮತ ಎಂದು ಜನರಿಗೆ ತಿಳಿಸಬೇಕು ಎಂದರು.

ಮೂರನೇ ಬಾರಿಗೆ ಮೋದಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಅನಂತರ ಬರಗಾಲ ತಾಂಡವ ವಾಡುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತ ವಾಗಿ ಮನೆ ಸೇರದ ಪರಿಸ್ಥಿತಿ ಇದೆ. ವಿಧಾನಸೌಧದಲ್ಲಿ ಪಾಕಿಸ್ಥಾನಕ್ಕೆ ಜಿಂದಾ ಬಾದ್‌ ಹೇಳುವ ದೇಶ ದ್ರೋಹಿಗಳನ್ನು ರಕ್ಷಿಸುವ ಕೆಲಸ ಕೆಲ ಸವನ್ನು ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ. ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ತಕ್ಕ ಪಾಠ ಬಿಜೆಪಿ ಕಲಿಸಲಿದೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್‌, ಎಸ್‌.ಎಲ್‌. ಭೋಜೇಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಉಪಾಧ್ಯಕ್ಷ ತಿಲಕ್‌ ರಾಜ್‌, ಜಯಂತ್‌ ಕೋಟ್ಯಾನ್‌, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಜಿಲ್ಲಾ ಸಹಪ್ರಭಾರಿ ರಾಜೇಶ್‌ ಕಾವೇರಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಚುನಾವಣ ಪ್ರಭಾರಿ ಹರಿಕೃಷ್ಣ ಬಂಟ್ವಾಳ್‌, ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್‌ ಮತ್ತು ಜಿಲ್ಲಾ, ತಾಲೂಕಿನ ಪ್ರಮುಖ ಮುಖಂಡರು, ಸಾವಿರಾರು ಕಾರ್ಯಕರ್ತರು ರೋಡ್‌ ಶೋದಲ್ಲಿ ಭಾಗವಹಿಸಿದರು.

ದೇಶದ ಭವಿಷ್ಯದ ಚುನಾವಣೆ: ಕ್ಯಾ| ಚೌಟ
ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, ಈ ಚುನಾವಣೆ ದೇಶದ ಭವಿಷ್ಯದ ಚುನಾವಣೆ. ಎಲ್ಲ ಕಾರ್ಯಕರ್ತರು ಇನ್ನು ಐದು ದಿನ ಬಿಜೆಪಿ ಬಗ್ಗೆ, ಪ್ರಧಾನಿ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುವ ಬಗ್ಗೆ ಮಾತನಾಡಬೇಕು. ಆ ಮೂಲಕ ಮತ್ತೂಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

ವಿಜಯೇಂದ್ರ ಮುಂದಿನ ಸಿಎಂ: ಪೂಂಜ
ಈ ಬಾರಿಯ ಚುನಾವಣೆ ಹಿಂದುತ್ವದ ಚುನಾವಣೆ, ಪ್ರಭು ಶ್ರೀರಾಮಚಂದ್ರನ ಚುನಾವಣೆ, ಪ್ರತಿಯೊಂದು ಮತವೂ ಶ್ರೀರಾಮನಿಗೆ ಕೊಡುವ ಮತವಾಗಿದ್ದು, ರಾಷ್ಟ್ರ ರಕ್ಷಣೆಯ ಚುನಾವಣೆಯಾಗಿದೆ. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಬಿ.ವೈ. ವಿಜಯೇಂದ್ರರಿಗೆ ಮುಂದಿನ ಮುಖ್ಯ ಮಂತ್ರಿಯಾಗುವ ಭಾಗ್ಯ ಕರುಣಿಸೋಣ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next