Advertisement

ಸೇನಾ ಅಧಿಕಾರಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟರನ್ನು ಜನತೆ 3 ಲಕ್ಷಅಂತರದಿಂದ ಗೆಲ್ಲಿಸಲಿದೆ

01:40 AM Apr 21, 2024 | Team Udayavani |

ಬಂಟ್ವಾಳ: ಜಿಲ್ಲೆಯ ಜನತೆಯ ರಕ್ತದ ಕಣ ಕಣದಲ್ಲಿ ರಾಷ್ಟ್ರೀಯತೆ ಇದೆ, ದೇಶ ಕಾಯುವ ಸೇನಾಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ, ಜನತೆ ಕ್ಯಾ| ಬ್ರಿಜೇಶ್‌ ಚೌಟರನ್ನು 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಅವರು ಶನಿವಾರ ಬಿ.ಸಿ.ರೋಡಿನ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಂಟ್ವಾಳ ಬಿಜೆಪಿ ಯಿಂದ ನಡೆದ ಬಿಜೆಪಿ ಕಾರ್ಯ ಕರ್ತರ ಸಮಾವೇಶದಲ್ಲಿ ಮಾತನಾಡಿ ದರು. ಜನಪ್ರಿಯತೆ ಹೆಚ್ಚಿಸಿ ಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಜನರ ಮನೆ -ಮನಗಳಿಗೆ ತಲುಪಿಸಿ ಎಂದರು.

ಹುಬ್ಬಳ್ಳಿಯ ನೇಹಾ ಹತ್ಯೆ ಉಲ್ಲೇಖಿಸಿದ ವಿಜಯೇಂದ್ರ, ಘಟನೆ ನಡೆದ ಕೂಡಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಅದು ವೈಯಕ್ತಿಕ ಎಂದು ಹೇಳಿಕೆ ನೀಡುತ್ತಾರೆ. ಹೋದ ಜೀವಕ್ಕೆ ಬೆಲೆ ಇಲ್ಲವೇ? ಆರೋಪಿ ಅಲ್ಪಸಂಖ್ಯಾಕ ಎನ್ನುವ ಕಾರಣಕ್ಕೆ ಕೊಲೆ ಕೃತ್ಯ ಕ್ಷುಲ್ಲಕ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಶಾಸಕರಾದ ರಾಜೇಶ್‌ ನಾಯ್ಕ ಉಳಿಪ್ಪಾಡಿಗುತ್ತು, ಹರೀಶ್‌ ಪೂಂಜ, ಡಾ| ಭರತ್‌ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜೆಡಿಎಸ್‌ ಮುಖಂಡ ಅಕ್ಷಿತ್‌ ಸುವರ್ಣ, ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಪೂಜಾ ಪೈ, ಜಗದೀಶ ಶೇಣವ, ಯತೀಶ್‌ ಆರ್ವಾರ್‌, ಹರಿಕೃಷ್ಣ ಬಂಟ್ವಾಳ, ರಾಜೇಶ್‌ ಕಾವೇರಿ, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಕಿಶೋರ್‌ ಕುಮಾರ್‌, ಉದಯಕುಮಾರ್‌ ಶೆಟ್ಟಿ, ನಂದನ್‌ ಮಲ್ಯ, ಪ್ರೇಮಾನಂದ ಶೆಟ್ಟಿ ಇದ್ದರು.

ಹಿರಿಯ ಆರೆಸ್ಸೆಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಸಭೆಯಲ್ಲಿದ್ದರು. ಚೆನ್ನಪ್ಪ ಕೋಟ್ಯಾನ್‌ ಸ್ವಾಗತಿಸಿದರು. ಡೊಂಬಯ ಅರಳ ನಿರ್ವಹಿಸಿದರು. ಪ್ರಾರಂಭದಲ್ಲಿ ವಿಜಯೇಂದ್ರ ಅವರು ಗಾಣದಪಡು³ ಶ್ರೀ ನಾರಾಯಣ ಗುರು ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

Advertisement

ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಕ್ಯಾ|ಚೌಟ
ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದನ್ನು ಖಂಡಿಸುವುದಕ್ಕೂ ಕಾಂಗ್ರೆಸಿಗರಿಗೆ ಧೈರ್ಯ ಇಲ್ಲ. ಈ ರೀತಿಯ ತುಷ್ಟೀಕರಣ ಮಾಡಿದರೆ ದೇಶದ ಉಳಿವು ಸಾಧ್ಯವೇ? ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಈ ಜೀವಮಾನದಲ್ಲಿ ನಾವು ನೋಡುತ್ತೇವೋ ಎನ್ನುವ ಸಂಶಯದಲ್ಲಿದ್ದೆವು. ಆದರೆ ಮೋದಿಯವರು ಅದನ್ನು ನಿರ್ಮಿಸಿ ತೋರಿಸಿದರು. ಅಂಥ ಶಕ್ತಿಯೇ ಮತ್ತೂಮ್ಮೆ ಈ ದೇಶ ಆಳಲು ನಾವೆಲ್ಲ ಕೈಜೋಡಿಸಬೇಕಾಗಿದೆ. ದೇಶದಲ್ಲಿ ಕಾಂಗ್ರೆಸ್‌ ಬಿತ್ತುತ್ತಿರುವ ರಾಷ್ಟ್ರವಿರೋಧಿ ಮಾನಸಿಕತೆ ವಿರುದ್ಧ ಮತ ಚಲಾಯಿಸಬೇಕಿದೆ ಎಂದರು.

ಬಿಜೆಪಿ ಸೇರ್ಪಡೆಗೆ ಪೂಜಾರಿ ಆಶೀರ್ವಾದ: ಕವಿತಾ ಸನಿಲ್‌
ಮಂಗಳೂರು ಮನಪಾ ಮಾಜಿ ಮೇಯರ್‌ ಕವಿತಾ ಸನಿಲ್‌ ಮತ್ತು ಬಂಟ್ವಾಳ ಪುರಸಭೆಯ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಕವಿತಾ ಸನಿಲ್‌, ಜನಾರ್ದನ ಪೂಜಾರಿ ನನ್ನ ರಾಜಕೀಯ ಗುರುಗಳು. ಬಿಜೆಪಿ ಸೇರುವಾಗಲೂ ಅವರ ಆಶೀರ್ವಾದ ಕೇಳಿದ್ದೇನೆ. ಹೋಗಿ, ಒಳ್ಳೆಯದಾಗಲಿ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರಕಾರವು ನೇಹಾ ಹತ್ಯೆಯನ್ನು ಕ್ಷುಲ್ಲಕ ಎನ್ನುವ ರೀತಿ ಬಿಂಬಿಸಿದ್ದನ್ನು ನೋಡಿದ್ದೇವೆ. ದೇಶದಲ್ಲಿ ಮೋದಿಯವರ ಆಡಳಿತ ಮೆಚ್ಚಿದ್ದು ದೇಶದಲ್ಲಿ ಹಿಂದುತ್ವ ಉಳಿಯಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿ ಸೇರುತ್ತಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿಗಿಂತ ಸೇನೆಯಲ್ಲಿ ದುಡಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಒಳ್ಳೆಯ ಮತ್ತು ಸಮರ್ಥ ಅಭ್ಯರ್ಥಿ. ಅವರ ಗೆಲುವಿಗಾಗಿ ನಾವೆಲ್ಲ ಜಾತಿ ಮತ ಭೇದ ಬದಿಗಿಟ್ಟು ಶ್ರಮಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next