Advertisement

Captain Brijesh Chowta ಮೂಲಕ ದ.ಕ. ಜಿಲ್ಲೆಯ ಅಭಿವೃದ್ಧಿ,ಜನರ ಕಲ್ಯಾಣ: ಮೋದಿ

12:13 AM Apr 22, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಚೌಟ ಸೇನಾ ಹಿನ್ನೆಲೆ ಹೊಂದಿರುವ ಅಭ್ಯರ್ಥಿ ಎನ್ನುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Advertisement

ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್‌’ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, “ಮಂಗಳೂರು ಲಿಟ್‌ ಫೆಸ್ಟ್‌’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು ಪಾರ್ಲಿಮೆಂಟಿಗೆ ಬರುತ್ತೀರಿ ಅನ್ನುವ ಸಂಪೂರ್ಣ ನಂಬಿಕೆ ನನಗಿದೆ. ನಿಮ್ಮಂತಹ ಸದಸ್ಯರು ನನ್ನ ಜತೆಗಿರುವುದು ದೊಡ್ಡ ಆಸ್ತಿ ಎಂದುಕೊಳ್ಳುತ್ತೇನೆ. ದೇಶ ಮತ್ತು ನಿಮ್ಮ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಮ್ಮ ತಂಡವು ಸದಾ ಬದ್ಧತೆ ಹೊಂದಿರುತ್ತದೆ. ಈ ಪತ್ರದ ಮೂಲಕ, ದ.ಕ. ಜಿಲ್ಲೆಯ ಜನರಿಗೆ ತಿಳಿಯಪಡಿಸುವುದು ಏನೆಂದರೆ, ಈ ಬಾರಿಯ ಚುನಾವಣೆ ಸಾಮಾನ್ಯ ರೀತಿಯದ್ದಲ್ಲ. ದೇಶದ ಜನತೆ ಅದರಲ್ಲೂ ಹಿರಿಯ ನಾಗರಿಕರು ಕಳೆದ ಐದಾರು ದಶಕಗಳಲ್ಲಿ ಅನುಭವಿಸಿದ ಕಷ್ಟಗಳೇನು ಎಂಬುದನ್ನು ತಿಳಿದು ಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಹಿಂದಿನ ಕಷ್ಟಗಳು ಕಳೆದು ದೇಶದ ಪ್ರತೀ ನಾಗರಿಕನ ಜೀವನ ಮಟ್ಟ ಸುಧಾರಣೆಯಾಗುತ್ತಿದೆ. ದೇಶದಲ್ಲಿ ಆಗಬೇಕಾದ ಕೆಲಸ ಇನ್ನೂ ಇದ್ದು, ಈ ಬಾರಿಯ ಚುನಾವಣೆ ನಮ್ಮ ಗುರಿ ಸಾ ಸುವಲ್ಲಿ ಮಹತ್ತರ ಘಟ್ಟವಾಗಿದೆ.

ಬಿಜೆಪಿಗೆ ಕೊಡುವ ಪ್ರತಿ ಮತವೂ ಸ್ಥಿರ ಸರಕಾರ ರೂಪಿಸುವಲ್ಲಿ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿಸುವಲ್ಲಿ ಮಹತ್ತರ ಕೊಡುಗೆ ನೀಡಲಿದೆ. ಈ ಮಹತ್ತರ ಗುರಿ ಸಾಧಿ ಸುವಲ್ಲಿ ದೇಶದ ಜನತೆ ಸ್ವಯಂಪ್ರೇರಿತವಾಗಿ ನಮ್ಮ ಜೊತೆಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಮತ್ತು ಈ ಚುನಾವಣೆ ಮೂಲಕ ದೇಶವನ್ನು ಸಮೃದ್ಧವಾಗಿಸುವಲ್ಲಿ ಕೊಡುಗೆ ನೀಡಲಿದ್ದಾರೆ. ಬೇಸಗೆ ಸಮಯದಲ್ಲಿ ಚುನಾವಣೆ ಆಗು ತ್ತಿರುವುದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಹಾಗಾಗಿ ಬಿಸಿಲೇರುವ ಮೊದಲೇ ಬೆಳಗ್ಗೆ ಬೇಗನೇ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬೂತ್‌ ಗೆದ್ದರೆ ಕ್ಷೇತ್ರ ಗೆದ್ದಂತೆ
ಲೋಕಸಭಾ ಕ್ಷೇತ್ರದಲ್ಲಿ ಪ್ರತೀ ಬೂತ್‌ ಗೆಲ್ಲುವುದಕ್ಕಾಗಿ ನಮ್ಮ ಕಾರ್ಯಕರ್ತರು ಮತದಾರರಿಗೆ ಮತ ಹಾಕುವಂತೆ ಪ್ರೇರಣೆ ನೀಡುವುದು ಮುಖ್ಯವಾಗಿದೆ. ಪ್ರತೀ ಬೂತಿನಲ್ಲಿ ಅತಿ ಹೆಚ್ಚು ಮತ ಹಾಕಿಸಿ, ಬೂತ್‌ ಗೆದ್ದರೆ ಲೋಕಸಭೆ ಕ್ಷೇತ್ರವನ್ನು ಗೆಲ್ಲುವುದಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ. ಇದೇ ವೇಳೆ, ಇತರ ಜನರಂತೆ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಪ್ರತಿ ಕ್ಷಣದಲ್ಲೂ ಬದ್ಧತೆ ಹೊಂದಿದ್ದೇನೆಂದು ಪ್ರತಿ ಮತದಾರನಿಗೂ ತಿಳಿಸಲು ಇಚ್ಚಿಸುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Advertisement

ಕಾಂಗ್ರೆಸ್‌ನ ಅಸಲಿ ಮುಖ ಬಯಲು: ಕ್ಯಾ| ಚೌಟ
ಮಂಗಳೂರು: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಹರ್ಷಿತ್‌ ಪೂಜಾರಿ, ಗಣೇಶ್‌, ಶ್ರೇಯಸ್‌ ಅಂಚನ್‌ ಸಹಿತ ಹಲವರ ಮೇಲೆ ಮೇಲೆ ಕೇಸು ದಾಖಲಿಸುವ ಮೂಲಕ ಕಾಂಗ್ರೆಸಿನ ಅಸಲಿ ಮುಖ ಮತ್ತೆ ಬಯಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಜೆಹಾದಿ ಕೃತ್ಯಕ್ಕೆ ಮುಗ್ಧ ಹಿಂದೂ ಯುವತಿ ಬಲಿಯಾಗಿದ್ದರೂ ಕಾಂಗ್ರೆಸ್‌ ನಾಯಕರು ಮೌನವಾಗಿ ಕುಳಿತಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳು ಪರೋಕ್ಷವಾಗಿ ಮತಾಂಧರಿಗೆ ಪ್ರೋತ್ಸಾಹ ನೀಡುವಂತಿವೆ. ಇಂತಹ ಅಮಾನುಷ ಕೊಲೆಯನ್ನು ಖಂಡಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ವಿರುದ್ದವೇ ಕೇಸು ದಾಖಲಿಸಿದ್ದು ಕಾಂಗ್ರೆಸಿನ ಓಲೈಕೆ ರಾಜಕೀಯಕ್ಕೆ ಜ್ವಲಂತ ಉದಾಹರಣೆ. ಸಮಾಜಘಾತಕ ಕೃತ್ಯಗಳು ನಡೆದಾಗ ತತ್‌ಕ್ಷಣವೇ ಅದರ ವಿರುದ್ಧ ಹೋರಾಟ ಮಾಡುವ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಂತಹ ದೇಶಭಕ್ತ ಸಂಘಟನೆ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅಂತಹ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಬೆದರಿಸುವ ಕೆಲಸ ಮಾಡಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದರು.

ಸುನಿಲ್‌ ಕುಮಾರ್‌ ಖಂಡನೆ: ನೇಹಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿರುವುದನ್ನು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಖಂಡಿಸಿದ್ದಾರೆ. ನ್ಯಾಯ ಕೇಳಿದ ವಿದ್ಯಾರ್ಥಿ ಸಂಘಟನೆ ವಿರುದ್ಧ ಕೇಸು ದಾಖಲಿಸಿರುವುದು ಅಕ್ಷಮ್ಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next