Advertisement

Lok Sabha Election; ಬಿಜೆಪಿ 370 ಸ್ಥಾನ ಗೆಲ್ಲಲಿದೆ: ಪ್ರಧಾನಿ ಮೋದಿ

12:59 AM Feb 18, 2024 | Shreeram Nayak |

ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾ ವಣೆಯಲ್ಲಿ ಬಿಜೆಪಿಯೊಂದೇ 370 ಸ್ಥಾನಗಳನ್ನು ಗೆಲ್ಲಲಿದೆ. ಎನ್‌ಡಿಎ ಒಟ್ಟು 400 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಇದು ಸಾಧ್ಯವಾದರೆ ಮಾತ್ರ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿಯವರಿಗೆ ನೈಜ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್‌ ಮಂಟಪಂ ನಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಮುಖರ್ಜಿಯವರು ತೀವ್ರವಾಗಿ ವಿರೋಧಿಸುತ್ತಿದ್ದರು. ಮೋದಿ ಸರಕಾರ 2019 ರಲ್ಲಿ ಇದನ್ನು ರದ್ದು ಮಾಡಿತ್ತು.

ಈ ಬಾರಿಯ ಚುನಾವಣೆಯಲ್ಲಿ ಪ್ರತೀ ಬೂತ್‌ನಲ್ಲಿ ಹಿಂದಿನ ಬಾರಿಗಿಂತ ಕನಿಷ್ಠ 370 ಹೆಚ್ಚು ಮತ ಪಡೆಯ ಬೇಕು. ಕಾರ್ಯಕರ್ತರು ಇದರ ಬಗ್ಗೆ ಗಮನಹರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್‌ ತಾಬ್ಡೆ ಮಾಹಿತಿ ನೀಡಿದ್ದಾರೆ. ವಿಪಕ್ಷಗಳು ಅನಗತ್ಯ ಮತ್ತು ಭಾವನಾತ್ಮಕ ವಿಷಯಗಳನ್ನು ಪ್ರಸ್ತಾವಿಸುತ್ತಿವೆ. ನಮ್ಮ ಚುನಾವಣೆ ಅಭಿಯಾನವು ಅಭಿವೃದ್ಧಿಕೇಂದ್ರಿತವಾಗಿರಬೇಕು. ಬಡವರ ಕಲ್ಯಾಣ, ದೇಶವನ್ನು ಜಗತ್ತಿನ ಹೆಮ್ಮೆಯ ಸ್ಥಾನದಲ್ಲಿ ನಿಲ್ಲಿಸುವ ಬಗ್ಗೆ ನಮ್ಮ ದೃಷ್ಟಿ ಇರಬೇಕು. ಇದನ್ನೇ ನಾವು ಜನರ ಬಳಿ ಒಯ್ಯಬೇಕು ಎಂದು ಮೋದಿ ಹೇಳಿದ್ದಾರೆ ಎಂದು ತಾಬ್ಡೆ ವಿವರಿಸಿದರು.

ಫೆ. 25ರಿಂದ ಅಭಿಯಾನ
ಈ ತಿಂಗಳ ಫೆ. 25ರಿಂದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫ‌ಲಾನು ಭವಿಗಳನ್ನು ತಲುಪಲು ಬಿಜೆಪಿ ಅಭಿಯಾನ ಆರಂಭಿಸಲಿದೆ ಎಂದು ತಾಬ್ಡೆ ಹೇಳಿದ್ದಾರೆ.

Advertisement

ಕೆಲವರು ನಾವು ಶ್ರೀರಾಮಮಂದಿರ ಕಟ್ಟುತ್ತೇವೆ, ಆದರೆ ದಿನಾಂಕವನ್ನು ಮಾತ್ರ ಹೇಳಿಲ್ಲ ಎಂದು ವ್ಯಂಗ್ಯವಾಡಿದ್ದರು. ರಾಮಮಂದಿರ ನಿರ್ಮಾಣವೂ ಆಯಿತು, ಜ. 22ರಂದು ಉದ್ಘಾಟನೆಯೂ ಆಯಿತು. ಸ್ವತಃ ಮೋದಿ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಬಿಜೆಪಿ ಪ್ರಸ್ತುತ ಜಗತ್ತಿನ ಬೃಹತ್‌ ರಾಜಕೀಯ ಪಕ್ಷ. 2014ಕ್ಕೆ ಹಿಂದೆ ದೇಶದ 5 ರಾಜ್ಯಗಳಲ್ಲಿ ಮಾತ್ರ ಪಕ್ಷ ಅಧಿಕಾರದಲ್ಲಿತ್ತು. ಈಗ 17 ರಾಜ್ಯಗಳಲ್ಲಿ ಎನ್‌ಡಿಎ ಸರಕಾರ, 12 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ ಎಂದು ನಡ್ಡಾ ಹೇಳಿದ್ದಾರೆ.

ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಒಟ್ಟು 11,500 ಮಂದಿ ಭಾಗವಹಿಸುತ್ತಿದ್ದಾರೆ. ದೇಶಾದ್ಯಂತದ ಬಿಜೆಪಿ ಪದಾಧಿಕಾರಿಗಳು, ಪಂಚಾಯತ್‌ ಚುನಾವಣೆಯಲ್ಲಿ ಗೆದ್ದವರಿಂದ ತೊಡಗಿ ಜಿಲ್ಲಾಧ್ಯಕ್ಷರು, ಕೇಂದ್ರ ಸಚಿವರ ವರೆಗೆ ಸಭೆಯಲ್ಲಿ ಉಪಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next