Advertisement

ಉ.ಪ್ರ.ದಲ್ಲಿ ಈ ಬಾರಿ 2014ರ ಪುನರಾವರ್ತನೆ; ಬಿಜೆಪಿ ಅಧಿಕಾರಕ್ಕೆ

03:19 PM Mar 02, 2017 | udayavani editorial |

ವಾರಾಣಸಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ವಿತ್ತ ಸಚಿವ ಅರುಣ್‌ ಜೇತ್ಲಿ ಅವರು  “ಉತ್ತರ ಪ್ರದೇಶದಲ್ಲಿ 2014ರ ಲೋಕಸಭಾಚುನಾವಣೆಗಳ ಯಶಸ್ಸೇ ಮರುಕಳಿಸಲಿದೆ ಮತ್ತು ಬಿಜೆಪಿಯು ಬಹುಮತವನ್ನು ಪಡೆದು ಸರಕಾರ ರಚಿಸಲಿದೆ’ ಎಂದು ಹೇಳಿದರು. 

Advertisement

ವಾರಾಣಸಿ ವ್ಯಾಪಾರಿ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಜೇತ್ಲಿ ಅವರು ಕೇಂದ್ರ ಸರಕಾರ ದೇಶದಲ್ಲಿನ ಕಪ್ಪು ಹಣ ಮತ್ತು ಭ್ರಷ್ಟಾಚರವನ್ನು ಮಟ್ಟಹಾಕಲು ಕಳೆದ ವರ್ಷ ನ.8ರಂದು ಕೈಗೊಂಡಿದ್ದ ನೋಟು ನಿಷೇಧದ ಕ್ರಮವನ್ನು ಸಮರ್ಥಿಸಿಕೊಂಡ ಜೇತ್ಲಿ, ಸರಕಾರದ ಈ ದಿಟ್ಟ ಕ್ರಮವು ಜನರ ವಿಶ್ವಾಸವನ್ನು ಗೆದ್ದುಕೊಂಡಿದೆ ಎಂದು ಹೇಳಿದರು. 

ನೋಟು ನಿಷೇಧದ ದಿಟ್ಟ ಕ್ರಮವನ್ನು ದೇಶದ ಹಾಗೂ ಜನರ ಹಿತಾಸಕ್ತಿಯಲ್ಲಿ ಕೈಗೊಳ್ಳಲಾಯಿತು. ನಮ್ಮ ಮತದಾರರಲ್ಲದ ಗ್ರಾಮೀಣ ಭಾಗದ ಜನರು ಈ ಬಾರಿ ನಮ್ಮ ಈ ದಿಟ್ಟ ಕ್ರಮಕ್ಕೆ ಬೆಂಬಲವಾಗಿ ಬಿಜೆಪಿ ಪರ ಮತಚಲಾಯಿಸಿದರು ಎಂದು ಜೇತ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next