Advertisement

BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?

09:29 PM Oct 09, 2024 | Team Udayavani |

ಹೊಸದಿಲ್ಲಿ: ಮುಖ್ಯಮಂತ್ರಿ ಅತಿಶಿಯವರನ್ನು ತಮ್ಮ ಅಧಿಕೃತ ನಿವಾಸಕ್ಕೆ ತೆರಳಿದ ಎರಡು ದಿನಗಳ ನಂತರ ಅವರನ್ನು ಹೊರಹಾಕಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಕಚೇರಿ ಬುಧವಾರ ಆರೋಪಿಸಿದೆ. ಸಿಎಂ ಬಂಗಲೆ ವಿವಾದವು ಎಎಪಿ ಮತ್ತು ಕೇಂದ್ರ ಸರಕಾರ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

Advertisement

“ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿವಾಸದಿಂದ ತೆರವುಗೊಳಿಸಲಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿ ಅತಿಶಿಯವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ಹೊರಹಾಕಿದ್ದಾರೆ” ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ. ಸಿಎಂ ಅಧಿಕೃತ ನಿವಾಸದಿಂದ ಹಲವಾರು ಪೆಟ್ಟಿಗೆಗಳು ಮತ್ತು ಸಾಮಗ್ರಿಗಳ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೋ ವೈರಲ್ ಆಗಿದೆ.

ಸಿಎಂ ಅತಿಶಿ ನಿವಾಸಕ್ಕೆ ಎರಡು ಬೀಗ ಹಾಕಿದ್ದು, ಕೀಗಳ ಹಸ್ತಾಂತರಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ಸರಿಯಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಕ್ರಮ ಬಳಕೆ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅತಿಶಿ ಅಧಿಕೃತ ನಿವಾಸವನ್ನು ಪಿಡಬ್ಲ್ಯುಡಿ ಇಲಾಖೆ ಬೀಗ ಹಾಕಿದೆ. ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಈ ಬಂಗಲೆ ಮಂಜೂರು ಮಾಡುವ ಉದ್ದೇಶದಿಂದ ಸಿಎಂ ನಿವಾಸವನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಯವರ ಕಚೇರಿ ದೂರಿದೆ.


ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಸಿಎಂ ನಿವಾಸ (ನಂಬರ್‌ 6, ಫ್ಲ್ಯಾಗ್‌ಸ್ಟಾಫ್‌ ರಸ್ತೆ ಸಿವಿಲ್‌ ಲೈನ್ಸ್‌)  ತೆರವಾಗಿತ್ತು. ನಂತರ, ಅತಿಶಿ ಸಿಎಂ ಆದ ನಂತರ ಆ ಮನೆಗೆ ತೆರಳಿದ್ದರು. ಇದೀಗ ಸಿಎಂ ಮನೆ ತೆರವು ಹಾಗೂ ಹಸ್ತಾಂತರ ವಿಚಾರವಾಗಿ ವಿವಾದ ಉಂಟಾಗಿದ್ದು, ಬಳಿಕ ಪಿಡಬ್ಲ್ಯುಡಿ ಕ್ರಮ ಕೈಗೊಂಡಿದೆ.

ಅತಿಶಿ ಸಿಎಂ ಅಧಿಕೃತ ನಿವಾಸ ಅಕ್ರಮ ಪ್ರವೇಶ: ಬಿಜೆಪಿ
ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅ.6ರಂದು ಪಿಡಬ್ಲ್ಯುಡಿ ಪತ್ರ ಹಂಚಿಕೊಂಡಿದ್ದಾರೆ, ಕೇಜ್ರಿವಾಲ್ “ತಮ್ಮ ಬಂಗಲೆಯನ್ನು ಪೂರ್ಣವಾಗಿ ಖಾಲಿ ಮಾಡಿಲ್ಲ” ಮತ್ತು ಅವರ ಹೆಚ್ಚಿನ ವಸ್ತುಗಳು ಇನ್ನೂ ಇವೆ. ಎಂದು ಆರೋಪಿಸಿದ್ದಾರೆ. ಸಿಎಂ ಅತಿಶಿ ಅಕ್ರಮವಾಗಿ ಈ ಅಧಿಕೃತ ನಿವಾಸಕ್ಕೆ ಪ್ರವೇಶಿಸಿದ್ದರು. ಮುಖ್ಯಮಂತ್ರಿಯವರಿಗೆ ಮಥುರಾ ರಸ್ತೆಯ ಎಬಿ-17 ಬಂಗಲೆ ನೀಡಲಾಗಿತ್ತು. ಅರವಿಂದ ಕೇಜ್ರಿವಾಲ್‌ ಸರಕಾರದಲ್ಲಿ  ಅತಿಶಿ ಸಚಿವರಾಗಿದ್ದಾಗಲೂ ಅದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಬಿಜೆಪಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next