Advertisement

BJP: ವಿಜಯೇಂದ್ರ ತಂಡದ ಚೊಚ್ಚಲ ಸಭೆ ನಾಡಿದ್ದು

11:24 PM Dec 24, 2023 | Team Udayavani |

ಬೆಂಗಳೂರು: ನೂತನ ತಂಡ ರಚನೆಗೊಂಡ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬುಧವಾರ ಹೊಸ ಪದಾಧಿಕಾರಿಗಳ ಸಭೆ ಕರೆದಿದ್ದು, ಮುಂದಿನ ಲೋಕ ಸಭಾ ಚುನಾವಣೆಗೆ ಸಜ್ಜಾಗಲಿದ್ದಾರೆ.

Advertisement

ಹೊಸ ತಂಡದ ಕುರಿತು ಪ್ರತಿಕ್ರಿಯಿ ಸಿರುವ ವಿಜಯೇಂದ್ರ, ಬೇರೆ ಬೇರೆ ಸಮಾಜಗಳು, ಪಂಗಡಗಳು, ಕರಾ ವಳಿ, ಮುಂಬಯಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಎಲ್ಲ ಭಾಗಗಳನ್ನು ಗುರುತಿಸಿ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಹಿರಿಯರಿಗೂ ಅವಕಾಶ ಮಾಡಿಕೊಟ್ಟಿದೆ ಎಂದು ತಮ್ಮ ಹೊಸ ತಂಡವನ್ನು ಸಮರ್ಥಿಸಿಕೊಂಡರು.

ಮುಂದಿನ ಲೋಕಸಭಾ ಚುನಾವಣೆಯ ವರೆಗೆ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಗೆ ಬಲ ತುಂಬಬೇಕೆಂಬ ಸಂದೇಶ ನೀಡುವ ಉದ್ದೇಶ ದಿಂದ ಬುಧವಾರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ದಲ್ಲಿದೆ. ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡುವುದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮೂಲಕ ಪ್ರಧಾನಿ ಮೋದಿ ಅವರಿಗೆ ಬಲ ತುಂಬುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮಾತನಾಡಿ, ತಂದೆಯ ಮಾದರಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪಕ್ಷವನ್ನು ಕಟ್ಟುತ್ತೇನೆ ಎಂದರು.

ಸದಾನಂದ ಗೌಡ, ಯತ್ನಾಳ್‌ ಅಸಮಾಧಾನ
ಬೆಂಗಳೂರು: ನೂತನ ಪದಾಧಿಕಾರಿಗಳ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಶಾಸಕ ಬಸನಗೌಡ ಯತ್ನಾಳ್‌ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ವರಿಷ್ಠರು ಕೋರ್‌ ಕಮಿಟಿ ಸದಸ್ಯರು ಅಥವಾ ರಾಜ್ಯ ಬಿಜೆಪಿಯ ಪ್ರಮುಖರನ್ನು ಕರೆದು ಮಾತನಾಡಿ ತಂಡ ಕಟ್ಟಬೇಕಿತ್ತು. ಆಂತರಿಕ ಭಿನ್ನಾಭಿಪ್ರಾಯ, ಕಚ್ಚಾಟಗಳಿಗೆ ಇತಿಶ್ರೀ ಹಾಕಬೇಕಿತ್ತು ಎಂದು ಡಿವಿಎಸ್‌ ಹೇಳಿದರು. ವಿಜಯೇಂದ್ರ ಅವರು ತಮಗೆ ಬೇಕಾದವರನ್ನು ನೇಮಿಸಿ ಕೊಂಡಿದ್ದಾರೆ ಎಂದು ಟೀಕಿಸಿರುವ ಯತ್ನಾಳ್‌, ಬಿಜೆಪಿಯೊಳಗೆ ಕೆಜೆಪಿ ಭಾಗ 2 ತಂಡವನ್ನು ರಚಿಸಿಕೊಂಡಿದ್ದಾರೆ ಎಂದು ಕುಟುಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next