Advertisement
ಸಮೀಪದ ಕೋಳೂರು ಕ್ರಾಸ್ ನ ಸುಮಾರು 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಿ.7 ಪುನಚ್ಚೆತನ ಏತ ನೀರಾವರಿ ಯೋಜನೆ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು, 1997-98 ರಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬಂತು ಅಲ್ಲಿಂದ ಈ ಯೋಜನೆಗಳು ನೆನಗುದಿಗೆ ಬಿದ್ದಿದ್ದು, ಸದ್ಯ ಬಿಜೆಪಿ ಸರಕಾರ ಏತ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ ಎಂದರು.
Related Articles
Advertisement
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಮಾಡುತ್ತಿರುವ ಹೋರಾಟ 200 ದಿನಗಳು ಪೂರೈಸಿದ್ದು, ಬಿಜೆಪಿ ಸರಕಾರ ಪ್ರಾರಂಭದಲ್ಲಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿ ಸದ್ಯ ಯಾವುದೇ ಇದರ ಬಗ್ಗೆ ತೆಲೆ ಕೆಡಿಸಿಕೊಳ್ಳುತ್ತಿಲ್ಲ ಇನ್ನೂ ಕೇವಲ 4 ರಿಂದ 5 ತಿಂಗಳ ಮಾತ್ರ ಬಿಜೆಪಿ ಸರಕಾರ ಆಡಳಿತ ಇರುವುದರಿಂದ ಇವರು ಯಾವುದೇ ಮೀಸಲಾತಿ ಹೆಚ್ಚಳ ಮಾಡುವುದಿಲ್ಲ ಇವರಿಗೆ ರಾಜ್ಯದ ಎಸ್ಸಿ, ಎಸ್ಟಿ ಸಮುದಾಯದ ಜನರು ಮುಂದಿನ ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಇದಲ್ಲದೆ ಕೋಳೂರು ಏತ ನೀರಾವರಿಯು 50 ಕ್ಯೂಸೆಕ್ಸ್ ಪ್ರಮಾಣದಲ್ಲಿ 3750 ಎಕರೆ ಪ್ರದೇಶದ ವ್ಯಾಪ್ತಿಯ ತುಂಬಾ ನೀರು ಸರಬರಾಜು ಆಗಲಿದೆ. ಇನ್ನೂ ಬೈಲೂರ್, ಸಿಂದಿಗೇರಿ, ಶಾನವಾಸಪುರ, ಕೊಂಚಗೇರಿ, ಡಿ. ಕಗ್ಗಲ್ ಗ್ರಾಮಗಳ ಜನರಿಗೆ ಅನುಕೂಲ ವಾಗಲಿದೆ ಎಂದು ತಿಳಿಸಿದರು. ಸದ್ಯ ಕಲ್ಲಕಂಭ, ಹಡ್ಲಿಗಿ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಯು ನೆನಗುದಿಗೆ ಬಿದ್ದಿದ್ದು ಶೀಘ್ರದಲ್ಲೇ ಅವುಗಳನ್ನು ಪುನಚ್ಚೆತನ ಗೊಳಿಸಲಾಗುವುದು ಎಂದರು.
ಪ್ರಾರಂಭದಲ್ಲಿ ದಮ್ಮೂರು ವೆಂಕವದೂತರ ದೇವಸ್ಥಾನದಿಂದ ಕೋಳೂರು ಡಿ 7 ಏತ ನೀರಾವರಿ ವರೆಗೆ ಎತ್ತಿನ ಬಂಡಿ ಮೂಲಕ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದರೆ ಸಚಿವ ಶ್ರೀ ರಾಮುಲು ತಮ್ಮ ಕಾರಿನ ಮೂಲಕ ತೆರಳಿ ಕೆಲ ನಿಮಿಷಗಳ ಶಾಸಕ ಗಣೇಶ್ ಬರುವವರಿಗೆ ಕಾದು ನಂತರ ಉದ್ಘಾಟನೆ ನೆರೆವೇರಿಸಿದರು.
ಉದ್ಘಾಟನೆ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಗಣೇಶ್ ಪರ ಮತ್ತು ಸಚಿವ ಶ್ರೀರಾಮುಲು ಪರ ಜೈಕಾರ ಹಾಕಿದ್ದು ಬಲು ಜೋರಾಗಿ ಕಂಡು ಬಂತು, ಅಲ್ಲದೆ ಈ ಯೋಜನೆ ಶಾಸಕ ಗಣೇಶ್ ಅವರು ಅನುಮೋದನೆ ಗೊಳಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಬಾಬು ಅವರ ಶ್ರಮ ಇದಕ್ಕೆ ಶೂನ್ಯ ಎಂದು ಸಚಿವ ಶ್ರೀರಾಮುಲು ಅವರ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಜೋರು ಜೋರಾಗಿ ಮಾತನಾಡಿದ್ದು, ಕಾರ್ಯಕರ್ತರ ನಡುವೆ ಕೆಲ ನಿಮಿಷ ಚರ್ಚೆಗೆ ಗ್ರಾಸ ವಾಗುವ ಸನ್ನಿವೇಶ ಮೇಲ್ನೋಟಕ್ಕೆ ಕಂಡು ಬಂತು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ವಿವಿಧ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳುಇದ್ದರು.