Advertisement
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಸಚಿವ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸೇರಿ ಕೆಲ ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
Related Articles
Advertisement
ಕಗ್ಗೊಲೆ ಅಗುತ್ತೆ ಆಂತಾ ಕಲ್ಪನೆ ಇರ್ಲಿಲ್ಲ : ಸಚಿವ ಕೆ.ಎಸ್.ಈಶ್ವರಪ್ಪ
ಹರ್ಷ ಕಗ್ಗೊಲೆ ಅಗುತ್ತೆ ಆಂತಾ ಕಲ್ಪನೆ ಇರ್ಲಿಲ್ಲ.ಸರ್ಕಾರ ಯಾರು ಗೂಂಡಾಗಳಿದ್ದಾರೆ ಅವರ ಬಂಧನ ಮಾಡಿದೆ.ಇಡೀ ರಾಜ್ಯದ ಹಿಂದೂ ಸಮಾಜ ಹರ್ಷನ ಕೊಲೆಯನ್ನು ಖಂಡಿಸುತ್ತಿದೆ. ಕುಟುಂಬಕ್ಕೆ ಆಗಿರುವ ಅನ್ಯಾಯ ವನ್ನು ಬಿಡೋದಿಲ್ಲ ಅಂತಾ ಸಿಎಂ ಹೇಳಿದ್ದಾರೆ.ಕುಟುಂಬಕ್ಕೆ ಏನೇನೂ ಪರಿಹಾರ ಕೊಡಬೇಕು ಅದನ್ನು ಕೊಡೋ ಭರವಸೆ ಸಿಎಂ ನೀಡಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕುಟುಂಬದ ಜೊತೆ ನಾವಿದ್ದೇವೆ : ಸಚಿವ ಕೋಟ ಮತಾಂಧ ಶಕ್ತಿಗಳು ಹರ್ಷ ಹತ್ಯೆ ಮಾಡಿವೆ.ಬೇರೆಯವರಿಗೆ ಹೀಗೆ ಆಗಬಾರದು.ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇವೆ, ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಹತ್ಯೆ ಮಾಡಿದ್ದಾರೆ.ಸರ್ಕಾರ ಸಮಾಜಕ್ಕೆ ದೊಡ್ಡ ಸವಾಲು ಇದು.ಹಿಂದೆ ಯಾವ ಸಂಘಟನೆ ಇದ್ದರೂ ಜೈಲಿಗೆ ಕಳುಹಿಸುವ ಕ್ರಮ ಅಗುತ್ತದೆ.ಟೀ ಕುಡಿಯಲು ಹೋದ ಹುಡುಗನನ್ನ ಕೊಲೆ ಮಾಡಿದ್ದಾರೆ.ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದೆವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಇನ್ಯಾರು ದುಷ್ಕೃತ್ಯಕ್ಕೆ ಕೈಹಾಕಬಾರದು : ವಿಜಯೇಂದ್ರ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಘಟನೆ ನಡೆಯಬಾರದಿತ್ತು.ಸರ್ಕಾರ ಗಂಭೀರ ತೆಗೆದುಕೊಂಡಿದ್ದರಿಂದ ಅರೋಪಿತರ ಬಂಧನವಾಗಿದೆ.ಕಾಂಗ್ರೆಸ್ ಮುಖಂಡರ ನಡುವಳಿಕೆ ತಲೆತಗ್ಗಿಸುವಂತಹದ್ದು ಎಂದು ವಿಜಯೇಂದ್ರ ಹೇಳಿದರು. ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂದ್ರೆ ಇನ್ಯಾರು ದುಷ್ಕೃತ್ಯಕ್ಕೆ ಕೈಹಾಕಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದರು.