ಬೆಂಗಳೂರು: ರಾಮನಗರದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಚಂದ್ರಶೇಖರ್‌ಗೆ ಗಾಳ ಹಾಕಿದ ಬಿಜೆಪಿ ಮಂಡ್ಯದಲ್ಲೂ ಚೆಲುವರಾಯಸ್ವಾಮಿಗೆ ಗಾಳ ಹಾಕಿದೆ.
ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಒಂದೊಮ್ಮೆ ಸೋತರೆ ವಿಧಾನಪರಿಷತ್‌ಗೆ ನೇಮಕ ಮಾಡುವ ಭರವಸೆ ನೀಡಿದೆ. ಚೆಲುವರಾಯಸ್ವಾಮಿ ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
ಚೆಲುವರಾಯಸ್ವಾಮಿ ಜತೆಗೆ ವಿಧಾನಪರಿಷತ್‌ನ ಮಾಜಿ ಸದಸ್ಯ ರಾಮಕೃಷ್ಣ ಅವರನ್ನು ಸೆಳೆಯಲು ಮುಂದಾಗಿದೆ ಎಂದು ಹೇಳಲಾಗಿದೆ.
ಮತ್ತೂಂದು ಮೂಲಗಳ ಪ್ರಕಾರ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್‌ನಾರಾಯಣ ಅಥವಾ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಮಂಡ್ಯ ಕ್ಷೇತ್ರದ ಉಪ ಚುನಾವಣೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸಿದರು.
ಶಿವಣ್ಣ, ನಂಜುಂಡೇಗೌಡ ಸೇರಿ 12 ಅರ್ಜಿಗಳು ಟಿಕೆಟ್ ಕೋರಿ ಬಂದಿದ್ದು, ವಿಧಾನಪರಿಷತ್‌ನ ಮಾಜಿ ಸದಸ್ಯ ಅಶ್ವಥ್‌ನಾರಾಯಣ್ ಅವರ ಬಗ್ಗೆಯೂ ಪ್ರಸ್ತಾಪಗೊಂಡು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಆಕಾಂಕ್ಷಿಗಳು ಹೇಳಿದರು.
ಹೀಗಾಗಿ, ಮತ್ತೂಮ್ಮೆ ಸಭೆ ಸೇರಿ ರಾಮನಗರ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.