Advertisement

ಲೋಕಸಭೆಯಲ್ಲಿ ಬಿಜೆಪಿ ಜಪ

06:35 AM Mar 20, 2019 | |

ಕ್ಷೇತ್ರದ ವಸ್ತುಸ್ಥಿತಿ: ಸತತ ಎರಡನೇ ಅವಧಿಗೆ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೂ, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಬಿಜೆಪಿ ಪರವಾಗಿದ್ದಾರೆ. 18 ವರ್ಷಗಳ ಕಾಲ ಆನೇಕಲ್‌ ಬಿಜೆಪಿಯ ಭದ್ರಕೋಟೆಯಾಗಿತ್ತಾದರೂ, 2013ರ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತವಿದೆ. ಆದರೆ, ಪುರಸಭೆ, ನಗರಸಭೆ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಲೋಕಸಭೆ ಚುನಾವಣೆ ಬಂದಾಗ ಮತದಾರ ಬಿಜೆಪಿಯತ್ತ ವಾಲುವುದು ಕಂಡುಬಂದಿದೆ.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,90,478 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜು ಗೌಡ 86,230, ಹಾಲಿ ಸಂಸದ ಸುರೇಶ್‌ 79,611 ಮತ ಪಡೆದಿದ್ದರು. ಜೆಡಿಎಸ್‌ನ ಪ್ರಭಾಕರ್‌ ರೆಡ್ಡಿ 16,889 ಮತ ಗಳಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಆದರೆ, ಜೆಡಿಎಸ್‌ ಬೆಂಬಲ ಕಾಂಗ್ರೆಸ್‌ಗೆ ದೊರೆಯುವುದರಿಂದ ಕಾಂಗ್ರೆಸ್‌ ಹಿಡಿತ ಸ್ವಲ್ಪಮಟ್ಟಿಗೆ ಹೆಚ್ಚಾದರೂ,

-ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಬಿಜೆಪಿಗೆ ವರವಾಗಬಹುದು. ಕ್ಷೇತ್ರದ ಹಲವು ಬಡಾವಣೆಗಳಿಗೆ ಕಾವೇರಿ ನೀರು ಹಾಗೂ ಏತನೀರಾವರಿ ಮೂಲಕ ಕೆರೆಗಳ ತುಂಬಿಸುವ ಕೆಲಸ ಹಾಗೂ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸಂಸದರ ಸಾಧನೆ. ಹೀಗಾಗಿ ಈ ಬಾರಿ ಹೆಚ್ಚು ಮತ ಬರಲಿವೆ ಎಂಬುದು ಕಾಂಗ್ರೆಸ್‌ ನಿರೀಕ್ಷೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಕ್ಷೇತ್ರಕ್ಕೆ ಕಾವೇರಿ ನೀರು ತರುವಲ್ಲಿ ಪ್ರಮುಖ ಪಾತ್ರ 
-ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬುವ ಕೆಲಸ
-30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
-ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ 

ನಿರೀಕ್ಷೆಗಳು
-ಮುತ್ಯಾಲ ಮಡು ಪ್ರವಾಸಿ ತಾಣದ ಅಭಿವೃದ್ಧಿ
-ಆನೇಕಲ್‌ ಕ್ಷೇತ್ರದ ಸಮಗ್ರ ಅಭಿವೃದ್ಧಿ
-ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ

Advertisement

-ಪುರಸಭೆ: 4 
-ಬಿಜೆಪಿ- 3
-ಕಾಂಗ್ರೆಸ್‌- 1
-ಜೆಡಿಎಸ್‌- 0
-ಹೆಬ್ಬಗೋಡಿ ನಗರಸಭೆ, ಆನೇಕಲ್‌ ತಾ.ಪಂ (ಬಿಜೆಪಿ)

-ಜನಸಂಖ್ಯೆ- 5,38,571
-ಮತದಾರರ ಸಂಖ್ಯೆ- 3,56,632
-ಪುರುಷರು- 1,88,716
-ಮಹಿಳೆಯರು- 1,67,916

2014ರ ಚುನಾವಣೆಯಲ್ಲಿ 
-ಚಲಾವಣೆಯಾದ ಮತಗಳು- 1,90,478 (ಶೇ.62.30)
-ಬಿಜೆಪಿ ಪಡೆದ ಮತಗಳು- 86,230 (ಶೇ.45.6)
-ಕಾಂಗ್ರೆಸ್‌ ಪಡೆದ ಮತಗಳು- 79,611 (ಶೇ.42.1) 
-ಜೆಡಿಎಸ್‌ ಪಡೆದ ಮತಗಳು- 16,889 (ಶೇ.8.9) 

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಬಿ.ಶಿವಣ್ಣ ಕಾಂಗ್ರೆಸ್‌ ಶಾಸಕ
-ಆನೇಕಲ್‌ ಪುರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿತ್ತು

ಮಾಹಿತಿ: ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next