Advertisement

ಹೋಳಿ ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತ : ಮದನ್ ಮಿತ್ರ  

06:36 PM Mar 29, 2021 | Team Udayavani |

ಕೊಲ್ಕತ್ತಾ :  ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮದನ್ ಮಿತ್ರ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ಮಾಡುತ್ತಾ  ಬಿಜೆಪಿ ನಾಮನಿರ್ದೇಶಿತ ಮೂವರು ನಟಿಯರೊಂದಿಗೆ ಹೋಳಿ ಆಚರಿಸಿದ್ದಾರೆ.

Advertisement

ಕಮರಹತಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಿತ್ರ ಅವರು  ಕೋಲ್ಕತ್ತಾದ ಬೆಹಾಲ ಪೂರ್ವ, ಬೆಹಾಲಾ ಪಶ್ಚಿಮ ಕ್ಷೇತ್ರಗಳಲ್ಲಿ ಮತ್ತು ಹೌರಾ ಶ್ಯಾಂಪೂರ್‌ನಿಂದ ಬಿಜೆಪಿ ಟಿಕೆಟ್‌ ಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಾಯೆಲ್ ಸರ್ಕಾರ್, ಶ್ರಬೊಂತಿ ಚಟರ್ಜಿ ಮತ್ತು ತನುಶ್ರೀ ಚಕ್ರವರ್ತಿ ಅವರೊಂದಿಗೆ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಿದ್ದಾರೆ.

ಓದಿ : ಅಸ್ಸಾಂ ನಲ್ಲಿ ಬಿಜೆಪಿ ಜಾಹೀರಾತಿಗಾಗಿ ಕೋಟಿಗಟ್ಟಲೆ ವ್ಯಯಿಸಿದ್ದೇಕೆ ..? : ಕಾಂಗ್ರೆಸ್

ಜನಪ್ರಿಯ ಹೋಳಿ  ಬಂಗಾಳಿ ಗೀತೆ ‘ಖೆಲ್ಬೋ ಹೋಳಿ ರಂಗ್ ಡೆಬೊನಾ’ ಹಾಡುತ್ತಾ ಮಿತ್ರ, “ಅವರು ನನ್ನ ಸ್ನೇಹಿತರು. ನಾವು ಒಬ್ಬರಿಗೊಬ್ಬರು ಹಲವು ವರ್ಷಗಳಿಂದ ಆತ್ಮೀಯರು. ಹೋಳಿಯಲ್ಲಿ ಯಾವುದೇ ರಾಜಕೀಯ ಇರಬಾರದು. ನಾನು ಅವರನ್ನು ಆಹ್ವಾನಿಸಿದ್ದೆ ಅವರು ನನ್ನೊಂದಿಗೆ ಹೋಳಿಯನ್ನು ಆಚರಿಸಿದ್ದಾರೆ . ”

“ರಾಜಕೀಯ ಭಿನ್ನಾಭಿಪ್ರಾಯಗಳು ನಮ್ಮ ವೈಯಕ್ತಿಕ ಸಂಬಂಧಗಳನ್ನು ಮರೆಮಾಚಬಾರದು. ನಾವು ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆಯನ್ನು ಹೊಂದಿರಬಹುದು ಆದರೆ, ನಾವೆಲ್ಲರೂ ಹೋಳಿಯಲ್ಲಿ ಒಟ್ಟಾಗಿರುತ್ತೇವೆ, ಅದು ಸೌಹಾರ್ದತೆ ಮತ್ತು ಸಾಮರಸ್ಯವನ್ನು ತೋರಿಸುತ್ತದೆ. ಇದು ಪಶ್ಚಿಮ ಬಂಗಾಳದ ಸಂಸ್ಕೃತಿ” ಎಂದು ಅವರು ಹೇಳಿದ್ದಾರೆ.

Advertisement

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತನುಶ್ರೀ, ನಾನು ನಿನ್ನೆಯ ತನಕ ಚುನಾವಣಾ ಪ್ರಚಾರದಲ್ಲಿದ್ದೆ. ಆದರೆ ಇಂದು  ಹೋಳಿ ಆಚರಣೆಗೆ ಬಿಡುವಿನಲ್ಲಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು, ಹಬ್ಬದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಶ್ರಬೊಂತಿ ಮತ್ತು ಪಾಯೆಲ್, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದ್ದಾರೆ.

ಓದಿ :  ‘ಜೈಲು ಹಕ್ಕಿ’ ಇಂದು ‘ಖಳನಾಯಕ’ನಾಗಿರುವುದು ಕಾಂಗ್ರೆಸ್ ನೈತಿಕ ದಿವಾಳಿಗೆ ಸಾಕ್ಷಿ : ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next