Advertisement

ಬಿಜೆಪಿ 3ನೇ ಪಟ್ಟಿ ರಿಲೀಸ್‌;ಯಾರಿಗೆಲ್ಲಾ ಟಿಕೆಟ್‌ ? ;11 ಇನ್ನೂ ಬಾಕಿ

05:46 PM Apr 20, 2018 | Team Udayavani |

ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿಯ 3 ನೇ ಪಟ್ಟಿ ಶುಕ್ರವಾರ  ಬಿಡುಗಡೆಯಾಗಿದ್ದು, 59 ಅಭ್ಯರ್ಥಿಗಳಿಗೆ 3 ನೇ ಪಟ್ಟಿಯಲ್ಲಿ ಟಿಕೆಟ್‌ ನೀಡಲಾಗಿದೆ. 

Advertisement

ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ್ದು ಮಾಜಿ ಶಾಸಕ ಸಂಪಂಗಿ ಅವರ ಬದಲು  ಪುತ್ರಿ ಎಸ್‌.ಅಶ್ವಿ‌ನಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪ್ರತಿಷ್ಠಿತ ಕಣವಾಗಿರುವ ಬಾದಾಮಿ,ಯಶವಂತಪುರ,ವರುಣಾ,ಹಾಸನದ ಬೇಲೂರು ಸೇರಿದಂತೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸದಿರುವುದು ಕುತೂಹಲ ಮೂಡಿಸಿದೆ.

ಪ್ರಮುಖ ಅಭ್ಯರ್ಥಿಗಳು
ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್‌.ಎ.ರಾಮ್‌ದಾಸ್‌, ಅರಸೀಕೆರೆಯಲ್ಲಿ ವಿ.ಸೋಮಣ್ಣ ಪುತ್ರ ಅರುಣ್‌ ಸೋಮಣ್ಣ, ಮೂಡಿಗೆರೆಯಲ್ಲಿ ಎಂ.ಪಿ.ಕುಮಾರಸ್ವಾಮಿ, ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಟಿಕೆಟ್‌ ನೀಡಲಾಗಿದೆ. ನಾಗಾಠಾಣಾ ಮೀಸಲು ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಪುತ್ರ ಡಾ ಗೋಪಾಲ ಕಾರಜೋಳ ಅವರಿಗೆ ಟಿಕೆಟ್‌ ನೀಡಲಾಗಿದೆ. 

ಬಾಗೇಪಲ್ಲಿಯಲ್ಲಿ ಸಾಯಿಕುಮಾರ್‌, ಕೂಡ್ಲಗಿಯಲ್ಲಿ ಕಾಂಗ್ರೆಸ್‌ನಿಂದ ಬಂದ ಎನ್‌.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. 

Advertisement

ಮಂಗಳೂರು ಹೊಸಮುಖಗಳಿಗೆ ಮಣೆ 
ಕರಾವಳಿಯ ಮಂಗಳೂರು ಉತ್ತರದಲ್ಲಿ ಡಾ. ಭರತ್‌ ಶೆಟ್ಟಿ,,ಮಂಗಳೂರು ಕ್ಷೇತ್ರಕ್ಕೆ ಸಂತೋಷ್‌ ಕುಮಾರ್‌ ರೈ ಮತ್ತು ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. 

ಉಡುಪಿಯಲ್ಲಿ ಮಾಜಿ  ಶಾಸಕ ರಘುಪತಿ ಭಟ್‌ ಅವರು ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ ಸೆಣಸಲಿದ್ದಾರೆ. ಕಾಪು ಕ್ಷೇತ್ರದಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್‌ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಅವರ ಎದುರು ಸೆಣಸಲಿದ್ದಾರೆ.

ಕುಮಟಾದಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ದಿನಕರ್‌ ಶೆಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next