ಬುಧವಾರ ಸಾವಿಗೀಡಾದ ಸಂತೋಷ್ ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದಾರೆ. ವಾಸಿಂ ಮತ್ತು ಸಂತೋಷ್ ಗೆಳೆಯರಾಗಿದ್ದು, ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಜಗಳವುಂಟಾಗಿ ವಾಸಿಂ ಸೂð ಡ್ರೈವ್‌ನಿಂದ ಸಂತೋಷ್ ಕಾಲಿಗೆ ಚುಚ್ಚಿದ್ದಾನೆ. ಇಲ್ಲಿ ಕೋಮು ದ್ವೇಷದ ಕಾರಣಕ್ಕೆ ಕೊಲೆ ನಡೆದಿಲ್ಲ. ವಾಸಿಂ ಲಾಂಗ್, ಮಚ್ಚು ಬಳಕೆ ಮಾಡಿ ಕೊಲೆ ಮಾಡಿಲ್ಲ. ಹಿಂದೂ ಮುಸ್ಲಿಮರ ನಡುವೆ ಗಲಾಟೆ ನಡೆದರೆ ಬಿಜೆಪಿಯವರು ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಗಿಂತ ಸದ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದೆ ಎಂದರು.
Advertisement
ಸಂತೋಷ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರಬೆಂಗಳೂರು: ಬುಧವಾರ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಕುಟುಂಬಕ್ಕೆ ರಾಜ್ಯ ಸರಕಾರದಿಂದ 10 ಲ.ರೂ. ಪರಿಹಾರ ನೀಡುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸಂತೋಷ್ ಕುಟುಂಬಸ್ಥರಿಗೆ ಸರಕಾರಿ ಉದ್ಯೋಗ ನೀಡುವಂತೆ ಮನವಿ ಬಂದಿದೆ.ಈ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದವರು ತಿಳಿಸಿದರು.