Advertisement

ಗುಜರಾತ್‌ ಸ್ಥಳೀಯ ಸಮರದಲ್ಲಿ ಬಿಜೆಪಿಗೆ ಭರ್ಜರಿ ಜಯ

03:17 AM Feb 24, 2021 | Team Udayavani |

ಅಹ್ಮದಾಬಾದ್‌: ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದಿದ್ದ ಮತದಾನದ ಫ‌ಲಿತಾಂಶ ಹೊರಬಿದ್ದಿದೆ.

Advertisement

ಅಹ್ಮದಾಬಾದ್‌ ಹಾಗೂ ಇತರ ಐದು ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ಫೆ. 21ರಂದು ಚುನಾ­ವಣೆ ನಡೆದಿತ್ತು. ಫೆ. 23ರ ಬೆಳಗ್ಗೆಯಿಂದ ನಡೆದ ಮತಗಣನೆ ತಾಂತ್ರಿಕ ಕಾರಣಗಳಿಂದ ರಾತ್ರಿಯಾದರೂ ಮುಕ್ತಾಯವಾಗಿರಲಿಲ್ಲ. ರಾತ್ರಿ 8 ಗಂಟೆಯ ಹೊತ್ತಿಗೆ ಸಿಕ್ಕ ಫ‌ಲಿತಾಂಶ ವರದಿಗಳನ್ವಯ, ಬಿಜೆಪಿ 449 ಸ್ಥಾನಗಳನ್ನು ಗೆದ್ದಿದೆ. ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ 43 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ.

ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಗುಜರಾತ್‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ 27 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ. ಅಹ್ಮದಾಬಾದ್‌, ರಾಜ್‌ಕೋಟ್‌, ಜಾಮ್‌ನಗರ್‌, ಭಾವ್‌ನಗರ್‌, ವಡೋದರಾ ಮಹಾ­ನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ­ವನ್ನು ತನ್ನ ವಶಕ್ಕೆ ತೆಗೆದು­ಕೊಂಡಿರುವುದು ಸ್ಪಷ್ಟವಾಗಿತ್ತು.

ಫ‌ಲಿತಾಂಶದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಸಿಎಂ ವಿಜಯ್‌ ರುಪಾಣಿ, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next