Advertisement

ಎಲ್ಲ ಪ್ರಾದೇಶಿಕ ಭಾಷೆಗಳೂ ಪೂಜನೀಯ: ಪ್ರಧಾನಿ ಮೋದಿ

11:18 AM May 21, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾಷೆಯ ಹೆಸರಿನಲ್ಲಿ ವಿವಾದಗಳನ್ನು ಹುಟ್ಟಿಸುವ ವ್ಯಕ್ತಿಗಳಿಗೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ನಾವು ಭಾರತದ ಎಲ್ಲ ಸ್ಥಳೀಯ ಭಾಷೆಗಳನ್ನು ಗೌರವಿಸುತ್ತೇವೆ, ಆ ಭಾಷೆಗಳಲ್ಲಿ ದೇಶದ ಸಂಸ್ಕೃತಿ ಪ್ರತಿಫ‌ಲನಗೊಳ್ಳುತ್ತದೆ. ಅವುಗಳನ್ನೆಲ್ಲ ಬಿಜೆಪಿ ಪೂಜನೀಯವಾಗಿ ಕಾಣುತ್ತದೆ. ಅಷ್ಟು ಮಾತ್ರವಲ್ಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

Advertisement

ನರೇಂದ್ರ ಮೋದಿಯವರ ಈ ಹೇಳಿಕೆಯ ಹಿಂದೆ ಕೆಲವು ದಿನಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌-ಬಾಲಿವುಡ್‌ ನಟ ಅಜಯ್‌ ದೇವಗನ್‌ ನಡುವೆ ನಡೆದ ಟ್ವಿಟರ್‌ ವಾಗ್ವಾದ ಉಂಟಾದ ಬೆನ್ನಲ್ಲೇ ಮೋದಿಯವರಿಂದ ಇಂಥದ್ದೊಂದು ಕಿವಿಮಾತು ಕೇಳಿಬಂದಿದೆ.

ಮನೆಮನೆಗೆ ತೆರಳಿ:
ಈ ವರ್ಷಾಂತ್ಯ ಮತ್ತು ಮುಂದಿನ ವರ್ಷ ಕರ್ನಾಟಕ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮೋದಿ, ಬಿಜೆಪಿ ಕಾರ್ಯಕರ್ತರು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅಭಿಯಾನ ಆರಂಭಿಸಬೇಕು. ಯಾವುದೇ ಬಡವ್ಯಕ್ತಿ, ಅರ್ಹ ಫ‌ಲಾನುಭವಿ ಸರ್ಕಾರದ ಕಲ್ಯಾಣ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳದಂತೆ ನೋಡಿ ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next