Advertisement

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

07:02 PM Nov 01, 2024 | Team Udayavani |

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಅಕ್ಟೋಬರ್ 31 ರೊಳಗೆ ನಗರದ ಹಾಳಾದ ರಸ್ತೆಗಳನ್ನು ಸರಿಪಡಿಸಲು ವಿಫಲರಾದ ಕಾರಣ ದೆಹಲಿಯ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಹೊರತು ಅದಕ್ಕೆ ದೀಪಾವಳಿ ವೇಳೆ ಸಿಡಿಸಿದ ಪಟಾಕಿ ಕಾರಣವಲ್ಲ ಎಂದು ಬಿಜೆಪಿ ಶುಕ್ರವಾರ (ನ1ರಂದು) ಆಕ್ರೋಶ ಹೊರ ಹಾಕಿದೆ.

Advertisement

ದೆಹಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ವಿಜೇಂದರ್ ಗುಪ್ತಾ, ದೀಪಾವಳಿಯ ಮೊದಲು ಹಾಳಾದ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಅವರ ಉತ್ತರಾಧಿಕಾರಿ ಅತಿಶಿ ಭರವಸೆ ನೀಡಿದರೂ ನಗರದ ನೂರಾರು ರಸ್ತೆಗಳು ಹದಗೆಟ್ಟಿವೆ. ಆಪ್ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ದೆಹಲಿಯಲ್ಲಿನ ಅಪಾಯಕಾರಿ ಗಾಳಿಯ ಗುಣಮಟ್ಟಕ್ಕೆ ಹೆಚ್ಚು ಕಾರಣವಾಗಿರುವ ಧೂಳಿನಂತಹ ಮಾಲಿನ್ಯದ ಸ್ಥಳೀಯ ಮೂಲಗಳ ಮೇಲೆ ಕೇಂದ್ರೀಕರಿಸಬೇಕು” ಎಂದರು.

‘ದೆಹಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ದೀಪಾವಳಿಯ ಮೊದಲೇ ಕೆಟ್ಟದಾಗಿದೆ. ಆಪ್ ಮತ್ತು ಕೇಜ್ರಿವಾಲ್ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ನಗರದಲ್ಲಿನ ಎಲ್ಲಾ ಹಾಳಾದ ರಸ್ತೆಗಳನ್ನು ಸರಿಪಡಿಸಿ ನೈರ್ಮಲ್ಯವನ್ನು ಸುಧಾರಿಸಿದರೆ, ಮಾಲಿನ್ಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next