Advertisement
ನಗರದ ಗುವಿವಿಯಲ್ಲಿ ಶನಿವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಅಭಿವೃದ್ಧಿ ಸಹಿಸದೇ ಹೊಟ್ಟೆಕಿಚ್ಚು ಪಡುವವರಿಗೆ ಏನು ಮಾಡಲು ಆಗೋದಿಲ್ಲ. 371ನೇ (ಜೆ) ಕಲಂ ಜಾರಿಗೆ ಬಂದಾಗಿನಿಂದಲೂ ಹೈಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಕಳೆದ ಮೂರು ವರ್ಷಗಳಲ್ಲಿ 890 ಕೋಟಿ ರೂ.ಗಳಷ್ಟು ಕೆಲಸಗಳಾಗಿವೆ. ಈ ಬಾರಿ 1500 ಕೋಟಿ.ರೂ.ಗಳನ್ನು ನೀಡಲಾಗಿದೆ.
Related Articles
Advertisement
ಬೆಳಗಾವಿ ರಾಣಿ ಚನ್ನಮ್ಮ ವಿವಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಮತ್ತು 1 ಕೋಟಿ ರೂ. ವೆಚ್ಚದಲ್ಲಿ ಚನಮ್ಮನ ಅಧ್ಯಯನ ಪೀಠವನ್ನು ಆರಂಭಿಸಲಾಗುತ್ತಿದೆ. ಅಲ್ಲದೆ, ಶಿಕ್ಷಣಕ್ಕಾಗಿ ಸಿದ್ದರಾಮಯ್ಯ ಅವರು 24 ಸಾವಿರ ಕೋಟಿ.ಗಳನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಪ್ರಾಥಮಿಕ ಹಾಗೂ ಪ್ರೌಢ, ಕಾಲೇಜು ಸೇರಿ ಒಟ್ಟು 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ.
ಮೊದಲ ಬಾರಿಗೆ ರಾಜ್ಯದಲ್ಲಿ ಪದವಿ ಮಟ್ಟದಲ್ಲಿ ವಸತಿ ಕಾಲೇಜುಗಳನ್ನು ಆರಂಭಿಸಲು ಕೂಡ ಬಜೆಟ್‌ನಲ್ಲಿ ಹಣವನ್ನುಮೀಸಲಿಡಲಾಗಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಸಾಧನೆಗಳನ್ನು ವಿವರಿಸಿದರು. ಮಲ್ಲಮ್ಮನ ಹೆಸರು ಆಂಧ್ರಪ್ರದೇಶದ ನಾಡಗೀತೆಯಲ್ಲಿ ಸ್ಮರಿಸಲಾಗುತ್ತದೆ ಎಂದರೆ ಎಂಥಹ ಪ್ರಭಾವಿ ಶರಣೆಯಾಗಿರಬೇಕು ಎನ್ನುವುದು ಅರ್ಥವಾಗುತ್ತದೆ.
ಇವತ್ತು ಅಧ್ಯಯನ ಪೀಠಗಳು ಕೇವಲ ಹೆಸರಿಗಷ್ಟೇ ಸಿಮೀತವಾಗುತ್ತಿರುವುದನ್ನು ವಿಷಾಧಿಸಿದ ಅವರು, ಕೂಡಲೇ ಪೀಠಗಳ ಹೊಣೆ ಹೊತ್ತವರು ಎಚ್ಚೆತ್ತು ಕೆಲಸ ಮಾಡಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಆರ್.ಬಿ. ಪಾಟೀಲ, ಸಚಿವರಾದ ಡಾ| ಶರಣ ಪ್ರಕಾಶ ಪಾಟೀಲ, ಮಾಜಿ ಸಚಿವರಾದ ಖಮರುಲ್ ಇಸ್ಲಾಂ, ಬಾಬುರಾವ ಚಿಂಚನಸೂರ,
ಹಾಲಿ ಶಾಸಕರು, ಮಾಜಿ ಶಾಸಕರು, ಮಹಾಪೌರ ಸೈಯ್ಯದ್ ಅಹ್ಮದ್, ಹಿರಿಯ ಬಂಡಾಯ ಸಾಹಿತಿ ಡಾ| ಚನ್ನಣ್ಣ ವಾಲಿಕಾರ, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ಸದಸ್ಯರು, ಹಿರಿಯ ಕಾಂಗ್ರೆಸ್ ಮುಖಂಡರು, ಶೈಕ್ಷಣಿಕ ಚಿಂತಕರು, ಗುವಿವಿ ಕುಲಸಚಿವ ಪ್ರೊ| ಸಿ.ಎಸ್. ಪಾಟೀಲ. ಹೇಮರಡ್ಡಿ ಮಲ್ಲಮ್ಮ ಪೀಠದ ಸಂಯೋಜಕ ಪ್ರೊ| ಎಸ್.ಎಂ. ಹಿರೇಮಠ ಇದ್ದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಎಚ್.ಟಿ. ಪೋತೆ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಡಾ| ದಯಾನಂದ ಅಗಸರ್ ವಂದಿಸಿದರು.