Advertisement

Telangana Assembly Elections: 52 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

01:25 PM Oct 22, 2023 | Team Udayavani |

ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

Advertisement

ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳ ಮೇಲೆ ಅಮಾನತುಗೊಂಡಿದ್ದ ಟಿ ರಾಜಾ ಸಿಂಗ್ ಅವರನ್ನು ಇಂದು ಮುಂಜಾನೆ ಹಿಂತೆಗೆದುಕೊಳ್ಳಲಾಗಿದೆ, ಅವರು ಗೋಷ್ಮಹಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕರೀಂನಗರ ಕ್ಷೇತ್ರದಿಂದ ಸಂಜಯ್ ಕುಮಾರ್ ಬಂಡಿ ಕಣಕ್ಕೆ ಇಳಿಯಲಿದ್ದಾರೆ.

ಹುಜೂರಾಬಾದ್ ಮತ್ತು ಗಜ್ವೇಲ್ ಸೇರಿದಂತೆ ಎರಡು ಕ್ಷೇತ್ರಗಳಿಂದ ರಾಜೇಂದ್ರ ಈಟಾಳ ಕಣಕ್ಕೆ ಇಳಿಯಲಿದ್ದು. ತೆಲಂಗಾ ರಾಷ್ಟ್ರ ಸಮಿತಿಯ (ಈಗ ಭಾರತ್ ರಾಷ್ಟ್ರ ಸಮಿತಿ) ಮಾಜಿ ಸದಸ್ಯ ಎಟಾಲ ಅವರು ಗಜ್ವೇಲ್‌ನಲ್ಲಿ ತಮ್ಮ ಮಾಜಿ ಪಕ್ಷದ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.

ಮಾಜಿ ಅಧ್ಯಕ್ಷ ಸಂಜಯ್ ಕುಮಾರ್ ಬಂಡಿ, ಬಾಪು ರಾವ್ ಸೋಯಂ ಮತ್ತು ಅರವಿಂದ್ ಧರ್ಮಪುರಿ ಸೇರಿದಂತೆ ಹಾಲಿ ಸಂಸದರ ಹೆಸರು ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿದೆ. ಸೋಯಮ್ ಬೋತ್ ನಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದು, ಧರ್ಮಪುರಿ ಕೋರುಟ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಜಗತ್ ಪ್ರಕಾಶ್ ನಡ್ಡಾ ನೇತೃತ್ವದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: Rakshit Shetty; ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಬಿಡುಗಡೆ ಮತ್ತೆ ಮುಂದೆ ಹಾಕಿದ್ಯಾಕೆ?

Advertisement

Udayavani is now on Telegram. Click here to join our channel and stay updated with the latest news.

Next