Advertisement
ಬಿಜೆಪಿಯ ಆಶ್ರಯ ಸಮಿತಿ ಸದಸ್ಯ ರಾಯನಗೌಡ ಪಾಟೀಲ ಮಾತನಾಡಿ, ಅವ ಧಿ ಮುಗಿದು ಎರಡು ತಿಂಗಳು ಗತಿಸಿದರೂ ಬಿಜೆಪಿ-ಕಾಂಗ್ರೆಸ್ ಒಪ್ಪಂದದಂತೆ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತಿನಂತೆ ನಡೆದುಕೊಂಡಿಲ್ಲ. ಯಾರು ಸಹ ಸರಿಯಾಗಿ ಪುರಸಭೆ ಒಪ್ಪಂದ ಕುರಿತು ಮಾತನಾಡದೆ ಇರುವುದರಿಂದ ಬಿಜೆಪಿ ಸದಸ್ಯರು ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರು ಒಪ್ಪಂದ ಮಾಡಿಕೊಳ್ಳುವಾಗ ತೋರಿಸಿದ್ದ ಮುತುವರ್ಜಿಯನ್ನು ಈಗಲೂ ತೋರಿಸಿ ಹೊಂದಾಣಿಕೆಯಂತೆ ನಮಗೆ ಅಧಿಕಾರವನ್ನು ಬಿಟ್ಟು ಕೊಡಬೇಕು ಎಂದರು.
ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು. ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೂಲಕ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಒಪ್ಪಂದದಂತೆ ನಡೆದುಕೊಳ್ಳದೆ ಅನ್ಯಾಯ ಮಾಡಿದ್ದಾರೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪುರಸಭೆಯ ಎದುರಿಗೆ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಮಹಾಂತೇಶ ಕಲಾಲ, ಪ್ರಭು ಇಬ್ರಾಹಿಂಪುರ, ಬಸವರಾಜ ಕಾತರಕಿ, ಎಂ.ಪಿ. ತೋಟಿ, ಅಡಿವೆಪ್ಪ ಶಿರಸಂಗಿ, ವಿಜಯಾ ಕಲಾಲ, ಸುಮಂಗಲಾ ಬೆಂಡಿಗೇರಿ, ಜ್ಯೋತಿ ಗೊಲ್ಲರ, ಗೀತಾ ಜಿನ್ನರ, ನಾಗೇಶ ಬೆಂಡಿಗೇರಿ, ಸಿದ್ದಪ್ಪ ಜಿನ್ನರ, ಪ್ರಕಾಶ ಪಾಚಂಗಿ, ದಾಡಿಬಾವಿ ಇನ್ನಿತರರಿದ್ದರು.